ಮೈಸೂರು : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು ಪೂಜೆ ಮಾಡುವ ವೇಳೆ ಕುಸಿದು ಬಿದ್ದು ಅರ್ಚಕರು ಒಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ತಡರಾತ್ರಿ ನಡೆದಿದೆ.
ಪೂಜೆ ವೇಳೆ ಅರ್ಚಕ ಉಪಾಧ್ಯಾಯ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಅರ್ಚಕ ಕುಸಿದು ಬೀಳುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಅಂಧಕಾಸುರ ವಧೆ ಪೂಜೆ ಸಮಯದಲ್ಲಿ ಕುಸಿದು ಬಿದ್ದು ಅರ್ಚಕ ಸಾವನಪ್ಪಿದ್ದಾರೆ. ಪ್ರತಿ ವರ್ಷ ನಂಜನಗೂಡಿನಲ್ಲಿ ಅಂಧಕಾಸುರ ವಧೆ ನಡೆಯುತ್ತದೆ. ಈ ವೇಳೆ ಅರ್ಚಕ ಉಪಾಧ್ಯಾಯ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಇದೀಗ ವರದಿಯಾಗಿದೆ.








