ಬೆಂಗಳೂರು : ಇತ್ತೀಚಿಗೆ ಹೃದಯಘಾತ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರು ಸಹ ಹಾರ್ಟ್ ಅಟ್ಯಾಕ್ ಗೆ ಬಲಿಯಾಗುತ್ತಿದ್ದಾರೆ. ಇದೀಗ ವ್ಯಕ್ತಿಯೊಬ್ಬರು ಲಘು ಹೃದಯಾಘಾತಕ್ಕೆ ಒಳಗಾಗಿ, ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ. ಆತನ ಪತ್ನಿ ಸಹಾಯಕ್ಕೆ ಅಂಗಲಾಚಿದರೂ ಯಾರೊಬ್ಬರೂ ಕೂಡ ಅವರ ನೋವಿಗೆ ಸ್ಪಂದಿಸಿಲ್ಲ.
ಹೌದು ಇಂದಿನ ಕಾಲದಲ್ಲಿ ಮಾನವೀಯತೆ ಕರುಣೆ ಅನ್ನೋದು ಅತ್ಯಂತ ವಿರಳವಾಗಿದೆ.ವ್ಯಕ್ತಿಯೊಬ್ಬ ನಡುರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಆತನನ್ನು ತುರ್ತು ಆಸ್ಪತ್ರೆಗೆ ದಾಖಲಿಸಲು ಸಕಾಲದಲ್ಲಿ ಅಂಬ್ಯುಲೆನ್ಸ್ ಲಭ್ಯವಾಗಲಿಲ್ಲ.. ರಸ್ತೆಯಲ್ಲಿ ಜನರ ಸಹಾಯಕ್ಕಾಗಿ ಅವರ ಹೆಂಡತಿ ಅಂಗಲಾಚಿದರೂ ಯಾರೊಬ್ಬರು ಅವರ ನೋವಿಗೆ ಸ್ಪಂದಿಸದೆ ಮಾನವೀಯತೆ ತೋರದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಗರದಲ್ಲಿ ವರದಿಯಾಗಿದೆ.
ನಗರದ ಬಾಲಾಜಿ ನಗರದ ಮೋಟಾರ್ ವಾಹನ ಮೆಕ್ಯಾನಿಕ್ ಆಗಿದ್ದ 34ವರ್ಷದ ವೆಂಕಟರಮಣನ್ ಡಿಸೆಂಬರ್ 13ರ ಮುಂಜಾನೆ ಎದೆ ನೋವಿನಿಂದ ಅಸ್ವಸ್ಥರಾಗಿದ್ದರು. ಈ ವೇಳೆ ಅಂಬ್ಯುಲೆನ್ಸ್ ಸಿಗದ ಕಾರಣ ಅವರ ಪತ್ನಿ ರೂಪಾ ಪತಿಯನ್ನು ದ್ವಿಚಕ್ರ ವಾಹನದಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ಆದರೆ, ದುರ್ದೈವ ಎಂಬಂತೆ ಅಲ್ಲಿ ವೈದ್ಯರು ಇಲ್ಲದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಾಧ್ಯವಿಲ್ಲ ಎಂದು ಮತ್ತೊಂದು ಆಸ್ಪತ್ರೆಗೆ ಸಾಗಿಸಲು ಸೂಚನೆ ನೀಡಿದ್ದರು.
ಈ ವೇಳೆ ರೂಪಾ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಇಸಿಜಿ ಮಾಡಿ ಲಘು ಹೃದಯಾಘಾತವಾಗಿದೆ ಎಂದು ತಿಳಿಸಿದರು. ಸೂಕ್ತ ಚಿಕಿತ್ಸೆ, ಅಂಬ್ಯುಲೆನ್ಸ್ ಸಿಗದ ಕಾರಣ, ಬೇರೆ ದಾರಿಯಿಲ್ಲದೆ, ರೂಪಾ ತನ್ನ ಪತಿಯನ್ನು ಮತ್ತೆ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೊರಟರು. ಈ ವೇಳೆ ಮಾರ್ಗ ಮಧ್ಯೆದಲ್ಲಿಯೇ ವೆಂಕಟರಮಣನ್ ಕುಸಿದು ಬಿದ್ದು, ಅವರ ವಾಹನ ಅಪಘಾತಕ್ಕೀಡಾಯಿತು. ಪರಿಣಾಮ ಇಬ್ಬರೂ ಗಾಯಗೊಂಡು ರಸ್ತೆಗೆ ಬಿದ್ದರು.
ಈ ಅಪಘಾತದ ನಡುವೆ ರೂಪಾ ದಾರಿಯಲ್ಲಿ ಹೋಗುವ ವಾಹನಗಳಿಗೆ ಕೈಮುಗಿದು ಬೇಡಿಕೊಂಡು ಪತಿಯನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗುವಂತೆ ಅಂಗಲಾಚಿದರು. ಆದರೆ, ದ್ವಿಚಕ್ರ ವಾಹನ ಮತ್ತು ಕಾರುಗಳ ವಾಹನ ಚಾಲಕರು ಮಾತ್ರ ನಿರ್ದಯೆಯಿಂದ ಚಲಿಸುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡಿದೆ. ಘಟನೆ ಬಳಿಕ ರೂಪಾ ಸಹೋದರಿ ಸ್ಥಳಕ್ಕೆ ತಲುಪಿದ್ದರು. ಆದರೆ, ಅಷ್ಟೊತ್ತಿಗಾಗಲೇ ವೆಂಕಟರಮಣನ್ ಪ್ರಾಣ ಹೋಗಿತ್ತು.
Heart wrenching scenes from Bengaluru. Commuters refuse to stop as a woman begs for help after her bike crashed while rushing her husband to the hospital after a heart attack. Several mins later a cab driver stopped, but by the time he was taken to the hospital he was dead. pic.twitter.com/PRisZTVb91
— Deepak Bopanna (@dpkBopanna) December 17, 2025








