ಮೈಸೂರು : ಮೈಸೂರಲ್ಲಿ ಘೋರ ದುರಂತ ಒಂದು ನಡೆದಿದ್ದು, ಒಣಗಿದ ದಾಸವಾಳ ಹೂ ನುಗಿದ್ದ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜುರು ಗ್ರಾಮದಲ್ಲಿ ಈ ಒಂದು ಮನಕಲಕುವ ಘಟನೆ ನಡೆದಿದೆ.
ದಾಸವಾಳ ಹೂವು ನುಂಗಿದ್ದ ಆರುವರೆ ತಿಂಗಳ ಚಿನ್ಮಯಗೌಡ ಮನೆಯ ಹೊಸ್ತಿಲಿನಲ್ಲಿ ಪೂಜೆಗೆ ಎಂದು ಹೂವು ಇಟ್ಟಿದ್ದರು. ಈ ವೇಳೆ ಚಿನ್ಮಯ್ ಗೌಡ ಒಣಗಿದ ದಾಸವಾಳ ಹೂವನ್ನು ನುಂಗಿ ಅಸ್ವಸ್ಥಗೊಂಡಿತ್ತು. ತಕ್ಷಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿ ಆಗದೆ ಆಸ್ಪತ್ರೆಯಲ್ಲಿ ಚಿನ್ಮಯ್ ಗೌಡ ಮೃತಪಟ್ಟಿದೆ ಸುದರ್ಶನ್ ಮತ್ತು ನವ್ಯ ಎರಡನೇ ಪುತ್ರ ಚಿನ್ಮಯ್ ಗೌಡ ಎಂದು ತಿಳಿದುಬಂದಿದೆ.








