ಕೋಲಾರ : ರಾಜ್ಯದಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದ್ದು, ಪೇಯಿಂಟ್ ನಲ್ಲಿ ಮಿಕ್ಸ್ ಮಾಡುವ ಥಿನ್ನರ್ ಕುಡಿದು ಬಾಲಕಿ ಸಾವನಪ್ಪಿದ್ದಾಳೆ, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯಲ್ಲಿ ಈ ಒಂದು ದುರಂತ ಘಟನೆ ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯಲ್ಲಿ ಎರಡು ದಿನಗಳ ಹಿಂದೆ ಜಾನು ಎಂಬ ಬಾಲಕಿ ಥಿನ್ನರ್ ಕುಡಿದು ಅಸ್ವಸ್ಥಳಾಗಿದ್ದಳು. ಕುಡಿಯುವ ನೀರು ಎಂದು ಭಾವಿಸಿ ಬಾಲಕಿ ಥಿನ್ನರ್ ಕುಡಿದಿದ್ದಾಳೆ. ತಕ್ಷಣ ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಇಂದು ಜಾನ್ಸಿ ಅಲಿಯಾಸ್ ಜಾನು (3) ಸಾವನ್ನಪ್ಪಿದ್ದಾಳೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








