ಬೆಂಗಳೂರು : ಇಡೀ ದೇಶವೇ ಬೆಚ್ಚಿ ಬೀಳಿಸುವಂತಹ ಘಟನೆ ಇದೀಗ ಬೆಂಗಳೂರಿನಲ್ಲಿ ನಡೆದಿದ್ದು, ಡ್ರಗ್ಸ್ ಬಳಸಿ ಯುವತಿಯರಿಗೆ ಗಾಳ ಹಾಕಿ ಅವರಿಗೆ ಮತ್ತ ಬರುವ ಮಾತ್ರೆ ಮಿಕ್ಸ್ ಮಾಡಿ ಕಾಲೇಜ್ ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಇದೀಗ ವರದಿಯಾಗಿದೆ.
ಕಾಲೇಜ್ ಹುಡುಗಿಯರನ್ನು ಟಾರ್ಗೆಟ್ ಮಾಡಿ, ಜೊತೆ ಮೋಜು ಮಸ್ತಿ ಮಾಡಿದ್ದು ಡ್ರಗ್ಸ್ ಮತ್ತು ಮದ್ಯದ ಜೊತೆ ಮತ್ತಿನ ಮಾತ್ರೆ ಮಿಕ್ಸ್ ಮಾಡಿದ್ದಾರೆ ಈ ವೇಳೆ ಆರ್ಯ ಪ್ರಜ್ಞಾವಸ್ಥೆಯಲ್ಲಿರುವ ಯುವತಿಯರು ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಪೊಲೀಸರ ತನಿಖೆಗಳೆ ಕೆಲವು ಸ್ಪೋಟಕ ಮಾಹಿತಿ ಬಯಲಾಗಿದೆ.
ಗ್ಯಾಂಗ್ ರೇಪ್ ಗ್ಯಾಂಗಿನ ನಿಖಿಲ್ ಮತ್ತು ಡಿಕ್ಸನ್ ಸಂಚು ಇದೀಗ ಬಯಲಾಗಿದೆ ಗ್ಯಾಂಗ್ ರೇಪ್ ಗ್ಯಾಂಗಿನ ಮಾಸ್ಟರ್ ಮೈಂಡ್ ನಿಖಿಲ್ ಎಂದು ತಿಳಿದುಬಂದಿದೆ ಹುಡುಗಿಯರಿಗೆ ನಿಖಿಲ್ ಬಲೆ ಬೀಸುವಂತೆ ಸೂಚನೆ ನೀಡುತ್ತಿದ್ದ ಡಿಕ್ಸನ್ ತಂಡದಿಂದ ಕಾಲೇಜು ಯುವತಿಯರಿಗೆ ಬಲೆ ಬೀಸಲಾಗುತ್ತಿತ್ತು. ಪ್ರತಿಷ್ಠಿತ ಕಾಲೇಜು ಯುವತಿಯರೇ ಈ ಒಂದು ಗ್ಯಾಂಗಿನ ಟಾರ್ಗೆಟ್ ಆಗಿತ್ತು. ಸ್ನೇಹದ ಬಲೇ ಬಿಸಿ ಪಾರ್ಟಿಗೆ ಆಹ್ವಾನ ನೀಡುತ್ತಿದ್ದರು. ಬನ್ನಿ ಪಾರ್ಟಿ ಇದೆ ಎಂದು ಎಂಜಾಯ್ ಮಾಡೋಣ ಎಂದು ಗ್ಯಾಂಗ್ ಬಲಿ ಹಾಕುತ್ತಿತ್ತು.
ಅಲ್ಲಿ ಯುವತಿಯರಿಗೆ ಡ್ರಗ್ಸ್ ಮತ್ತು ಮಧ್ಯದಲ್ಲಿ ಮತ್ತು ಬರುವ ಮಾತ್ರೆ ಮಿಕ್ಸ್ ಮಾಡುತ್ತಿದ್ದರು ಬಳಿಕ ಯುವತಿಯರು ಅರೆ ಪ್ರಜ್ಞಾವಸ್ಥೆ ತಲುಪಿದಾಗ ಈ ಒಂದು ಗ್ಯಾಂಗ್ ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದರು.ಎಂದು ಪೊಲೀಸರ ತನಿಖೆಯ ವೇಳೆ ಬಯಲಾಗಿದೆ. ಯುವತಿ ಒಪ್ಪುತ್ತಿದ್ದಂತೆ ನಿಖಿಲ್ ಗೆ ಡಿಕ್ಸನ್ ಮಾಹಿತಿ ನೀಡುತ್ತಿದ್ದ. ಜಕ್ಕೂರಿನ ಬಾಡಿಗೆ ವಿಲ್ಲಾದಲ್ಲಿ ನಿಖಿಲ್ ಪಾರ್ಟಿ ಆಯೋಜನೆ ಮಾಡುತ್ತಿದ್ದ.
ಪಾರ್ಟಿಗೆ ಸೆಕ್ಸ್ ಮಾಡುವಂತೆ ಹೇಳುತ್ತಿದ್ದರು. ಕೆಲ ಯುವತಿಯ ಒಪ್ಪಿಸಿ ಸೆಕ್ಸ್ ಗೆ ಸಹಕರಿಸುತ್ತಿದ್ದರು. ಇನ್ನೂ ಕೆಲವು ಯುವತಿಯರು ಸೆಕ್ಸಿಗೆ ಒಪ್ಪುತ್ತಿರಲಿಲ್ಲ. ಒಪ್ಪದ ಯುವತಿಯರಿಗೆ ಕಂಠಪೂರ್ತಿ ಕುಡಿಸುತ್ತಿದ್ದರು. ಬಲವಂತವಾಗಿ ಡ್ರಗ್ಸ್ ಸೇವಿಸುವಂತೆ ಇದರ ಜೊತೆ ಮತ್ತು ಬರುವ ಮಾತ್ರೆ ಮಿಕ್ಸ್ ಮಾಡುತ್ತಿದ್ದರು.ಯುವತಿಯರು ಪ್ರಜ್ಞೆ ತಪ್ಪುತಿದಂತೆ ರಾಕ್ಷಸರು ಅತ್ಯಾಚಾರ ಎಸಗಿದ್ದಾರೆ. ಬೆತ್ತಲೆ ಫೋಟೋ ಮತ್ತು ವಿಡಿಯೋ ರೆಕಾರ್ಡ್ ಮಾಡಿ ಅವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನು ನಿಖಿಲ್ ಮತ್ತು ಡಿಕ್ಸನ್ ಪಾರ್ಟಿಯಾದ ಬೆಳಿಗ್ಗೆ ಏನು ಗೊತ್ತಿಲ್ಲದಂತೆ ನಾಟಕ ಮಾಡುತ್ತಾರೆ. ಕುಡಿತ ನಶೆಯಲ್ಲಿ ಇದ್ದಿವಿ. ಏನಾಗಿದೆ ಗೊತ್ತಿಲ್ಲ ಎಂದು ಡ್ರಾಮಾ ಬೇರೆ ಮಾಡುತ್ತಾರೆ ನಿಖಿಲ್ ಮತ್ತು ಡಿಕ್ಷನ ಬಚಾವಾಗುತ್ತಿದ್ದರು.ಇದೇ ರೀತಿ ಹಲವು ಬಾರಿ ಈ ಒಂದು ಗ್ಯಾಂಗ್ ಎಸ್ಕೇಪ್ ಆಗುತ್ತ. ಕೆಲ ಯುವತಿಯರು ಮರ್ಯಾದೆ ಹೆದರಿ ವಾಪಸ್ ಹೋಗಿದ್ದಾರೆ. ಆದರೆ ಈ ಬಾರಿ ಓರ್ವ ಯುವತಿಯಿಂದ ದೂರು ದಾಖಲಾಗಿದೆ. ಅಮೃತಳ್ಳಿ ಪೊಲೀಸರಿಗೆ ಯುವತಿ ದೂರು ನೀಡಿದ್ದು ಪೊಲೀಸರನ್ನು ಸುಮಾರು 19 ಸಂತ್ರಸ್ತ ಯುವತಿಯರು ಸಂಪರ್ಕಿಸಿದ್ದಾರೆ. ತಮ್ಮ ಮೇಲೂ ದೌರ್ಜನ್ ಆಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 19 ಯುವತಿಯರ ಹೇಳಿಕೆಗೆ ಪೊಲೀಸರು ಸಹ ಬೆಚ್ಚಿಬಿದ್ದಿದ್ದಾರೆ.








