ತುಮಕೂರು: ತುಮಕೂರು: ಮೂರು ಮಕ್ಕಳ ತಾಯಿಯೊಬ್ಬಳು ಗಂಡನ ಸಂಬಳ ಸಾಲದು ಅಂತ ಗಂಡನ ಗಮನಕ್ಕೂ ಬಾರದೇ ಸೌದಿಗ ಹೋಗಿ ಹುಕ್ಕಾ ಬಾರ್ ಡ್ಯಾನ್ಸ್ ಅಂತಾ ಮೋಜು ಮಾಡುತ್ತಿದ್ದರಿಂದ ಮನದೊಂದು ಗಂಡ ಮನನೊಂದ ಮೂರು ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಸಾಹೇರಾ ಬಾನು ಹೀಗೆ ದುಬೈನಲ್ಲಿ ಮೋಜು ಮಸ್ತಿ ಮಾಡುತ್ತಿರುವ ಮಹಿಳೆಯಾಗಿದ್ದು, ಆಕೆ ಸಮೀವುಲ್ಲಾಗೆ ವೀಡಿಯೋ ಕಾಲ್ ಮಾಡಿ ನಾನು ಇಲ್ಲೇ ಇರುತ್ತೇನೆ ಅಲ್ಲಿಗೆ ಬರೋದಿಲ್ಲ ಅಂತ ಹೇಳಿದ್ದಳಂತೆ. ಇದರಿಂದ ಮನನೊಂದ ತನ್ನ ಮೂವರು ಮಕ್ಕಳೊಂದಿಗೆ ಸಮೀವುಲ್ಲಾ ಆಗಸ್ಟ್ 13 ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ಕೂಡಲೇ ಆತನನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ಸಂಬಂಧಿಕರು ದಾಖಲಿಸಿದ್ದಾರೆ.ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 15ಕ್ಕೆ ಸಮೀವುಲ್ಲಾ ಸಾವನ್ನಪ್ಪಿದ್ದು, ಸದ್ಯ ಮೂವರು ಮಕ್ಕಳು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ತುಮಕೂರಿನ ತಿಲರ್ಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೋಟೋ : ಧೂಮಪಾನ ಆರೋಗ್ಯಕ್ಕೆ ಹಾನಿಕಾರ