ಶಿಯೋಪುರ : ಮಧ್ಯಪ್ರದೇಶದ ಶಿಯೋಪುರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ನಾಚಿಕೆಗೇಡಿನ ಘಟನೆಯೊಂದು ಬೆಳಕಿಗೆ ಬಂದಿದೆ. ಗಂಡ ತನ್ನ ಹೆಂಡತಿಯ ಕೈಕಾಲುಗಳನ್ನ ಕಟ್ಟಿ ಕ್ರೌರ್ಯದ ಎಲ್ಲ ಮಿತಿಗಳನ್ನ ದಾಟಿದ್ದಾನೆ. ಅಷ್ಟೇ ಅಲ್ಲ, ಪತ್ನಿಯ ಖಾಸಗಿ ಅಂಗಕ್ಕೆ ಫೆವಿಕ್ವಿಕ್ ಅಂಟು ಹಾಕಿದ ಪಾಪಿ ಪತಿ, ಇಡೀ ಮಾನವ ಕುಲವೇ ತಲೆ ತಗ್ಗಿಸುವಂತೆ ಮಾಡಿದ್ದಾನೆ.
ಸೇನ್ ಒಬ್ಬ ಮಾದಕ ವ್ಯಸನಿಯಾಗಿದ್ದು, ಆತ ಆಗಾಗ್ಗೆ ವಿವಿಧ ರೀತಿಯ ಮಾದಕ ವಸ್ತುಗಳನ್ನ ತೆಗೆದುಕೊಳ್ಳುತ್ತಾನೆ. ಆತನ ಈ ಆಭ್ಯಾಸದಿಂದಾಗಿ ಹೆಂಡತಿ ಕೂಡ ತುಂಬಾ ಅಸಮಾಧಾನಗೊಂಡಿದ್ದು, ಮನೆಯಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಜಗಳಗಳು ನಡೆಯುತ್ತಿದ್ವು. ಆದ್ರೆ, ಅಂದು ಆತನ ನಶೆಯ ಮಿತಿ ಮೀರಿತ್ತು. ತನ್ನ ಹೆಂಡತಿಯನ್ನ ಹಣಕ್ಕಾಗಿ ಪೀಡಿಸಿದ ಆಕೆಯ ಕೈ ಕಾಲುಗಳನ್ನ ಕಟ್ಟಿ ಖಾಸಗಿ ಅಂಗಕ್ಕೆ ಫೆವಿಕ್ವಿಕ್ ಅಂಟು ಹಾಕಿದ್ದಾನೆ. ನೋವು ತಾಳದೇ ಕಿರುಚಲು ಪ್ರಾರಂಭಿಸಿದ ಮಹಿಳೆಯನ್ನ ನೆರೆಹೊರೆಯವ್ರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.