ಬೆಂಗಳೂರು : ಇತ್ತೀಚಿಗೆ ರಾಜ್ಯ ಹಾಗೂ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆಗುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇದೀಗ ಶಾಕಿಂಗ್ ಮಾಹಿತಿ ಒಂದು ಬಹಿರಂಗವಾಗಿದ್ದು, ಕೇವಲ ಹೆಣ್ಣು ಮಕ್ಕಳ ಮೇಲೆ ಅಷ್ಟೇ ಅಲ್ಲದೆ ಬಾಲಕರ ಮೇಲು ಕೂಡ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಶಾಕಿಂಗ್ ಅಂಶ ಬಯಲಾಗಿದೆ.
ಈ ಕುರಿತು ಬೆಂಗಳೂರಿನ ಪೊಲೀಸರು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಸರಿ ಸುಮಾರು 114 ಬಾಲಕರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಕಳೆದ ಅಕ್ಟೋಬರ್ ಅಂತ್ಯಕ್ಕೆ ರಾಜ್ಯದಲ್ಲಿ 33 ಪೋಕ್ಸೋ ಕೇಸ್ಗಳು ದಾಖಲಾಗಿವೆ. ದಾಖಲಾದ 114 ಪ್ರಕರಣಗಳಲ್ಲಿ 7 ಕೇಸ್ಗಳಲ್ಲಿ ಮಾತ್ರ ಶಿಕ್ಷೆಯಾಗಿದ್ದು, ಉಳಿದ ಪ್ರಕರಣಗಳು ವಿಚಾರಣಾ ಹಂತದಲ್ಲಿವೆ.
2021ರಲ್ಲಿ 24, 2022ರಲ್ಲಿ 25 ಪ್ರಕರಣಗಳು, 2023ರಲ್ಲಿ 33 ಹಾಗೂ ಈ ವರ್ಷ 32 ಪ್ರಕರಣಗಳು ದಾಖಲಾಗಿವೆ. ಬಾಲಕರ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳ ಪೈಕಿ ಬೆಂಗಳೂರು ನಗರದಲ್ಲಿ ನಾಲ್ಕು ವರ್ಷಗಳಲ್ಲಿ 17 ಪ್ರಕರಣ ವರದಿಯಾಗಿವೆ.ಬಾಲಕರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಪೈಕಿ ಬಹುತೇಕ ಪುರುಷರೇ ಆರೋಪಿಗಳಾಗಿದ್ದಾರೆ.ಬೆರಳೆಣಿಕೆ ಪ್ರಕರಣಗಳಲ್ಲಿ ಮಹಿಳೆಯರು ಆರೋಪಿಗಳಗಿದ್ದಾರೆ ಎಂದು ತಿಳಿಸಿದ್ದಾರೆ.