ಬೆಂಗಳೂರು : ಬೆಂಗಳೂರಿನಲ್ಲಿ ಪಾಗಲ್ ಪ್ರೇಮಿಯೊಬ್ಬ, ತಾನು ಪ್ರೀತಿಸುತ್ತಿದ್ದ ಯುವತಿಯ ಪ್ರಿಯಕರನನ್ನು ಹಲ್ಲೆ ಮಾಡಲು ಹೋಗಿ ರಸ್ತೆಯಲ್ಲಿ ಸಿಕ್ಕ ಅಪರಚಿತ ವ್ಯಕ್ತಿಗೆ ಮಾರಕಾಸ್ತ್ರದಿಂದ ಹಲ್ಲೆಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಮಾಗಡಿರೋಡ್ ನ ಬಾರ್ ಬಳಿ ಮಂಜೇಶ್ ಎಂಬ ಯುವಕ ತಾನು ಪ್ರೀತಿಸುತ್ತಿದ್ದ ಯುವತಿಯ ಪ್ರಿಯಕರನನ್ನು ಹಲ್ಲೆ ಮಾಡಲು ಹೋಗಿ ರಸ್ತೆಯಲ್ಲಿ ಸಿಕ್ಕ ಅಪರಚಿತ ವ್ಯಕ್ತಿಗೆ ಮಾರಕಾಸ್ತ್ರದಿಂದ ಹಲ್ಲೆಮಾಡಿ ಪರಾರಿಯಾಗಿದ್ದಾನೆ. ನಡುರಸ್ತೆಯಲ್ಲಿ ಭೀಕರವಾಗಿ ಹಲ್ಲೆ ನಡೆದಿದ್ದು ಸಿಸಿಟಿವಿಯಲ್ಲಿ ಘಟನೆ ದೃಶ್ಯ ಸೆರೆಯಾಗಿದೆ.
Good News : ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಗುಡ್ ನ್ಯೂಸ್ : ಸಾಲ-ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಹಲ್ಲೆ ಮಾಡಿದ ಮಂಜೇಶ್ ಗೆ ಯುವತಿಯೋರ್ವಳ ಮೇಲೆ ಪ್ರೀತಿಯಾಗಿತ್ತು. ಆದ್ರೆ ಆ ಯುವತಿಗೆ ನಿತೀನ್ ಎಂಬಾತನ ಮೇಲೆ ಪ್ರೀತಿಯಾಗಿತ್ತು. ಹೀಗಾಗಿ ಯುವತಿಯ ಪ್ರಿಯಕರನ ಮೇಲೆ ಕೋಪಗೊಂಡಿದ್ದ ಮಂಜೇಶ್ ಅಂಡ್ ಗ್ಯಾಂಗ್ ನಿತಿನ್ ಎಂದು ಭಾವಿಸಿ ಅಪರಿಚಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ