ಬೆಂಗಳೂರು: ಮನೆಯಿಂದ ನಾಯಿ ಹೊರಹಾಕುವ ವಿಚಾರಕ್ಕೆ ನೊಂದು ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡಿರುವವರನ್ನು ತಾಯಿ ದಿವ್ಯಾ ಹಾಗೂ ಬೇಬಿ ಅಂತ ತಿಳಿದು ಬಂದಿದೆ.
ಮೃತ ದಿವ್ಯಾ ಉಸಿರಾಟ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಈ ನಡುವೆ ಅವರ ಆರೋಗ್ಯದಲ್ಲಿ ತೀವ್ರತೆರನಾಗಿ ಏರುಪೇರು ಉಂಟಾದ ವೇಳೆಯಲ್ಲಿ ಮನೆಯಲ್ಲಿರುವ ನಾಯಿಯಿಂದ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಮನೆಯಲ್ಲಿ ನಾಯಿ ಇದ್ದರೇ ಕಾಯಿಲೆ ವಾಸಿಯಾಗಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ನಡುವೆ ದಿವ್ಯ ಅತ್ತೆ ಮಾವ ನಾಯಿಯನ್ನು ಯಾರಿಗಾದ್ರು ನೀಡುವಂತೆ ಸೂಚನೆ ನೀಡಿದ್ದಾರೆ, ಈ ನಡುವೆ ಇದಕ್ಕೆ ಸಂಬಂಧಪಟ್ಟಂತೆ ಮನೆಯಲ್ಲಿ ಜಗಳವಾಗಿದೆ.ಇದರಿಂದ ಮನನೊಂದು ದಿವ್ಯ ತನ್ನ ಮಗಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆಯನ್ನು ಪೋಲಿಸರು ನಡೆಸುತ್ತಿದ್ದಾರೆ.