ಬೆಳಗಾವಿ : ತವರು ಮನೆಗೆ ಹೋಗಿದ್ದ ಪತ್ನಿ ವಾಪಸ್ ಬರಲ್ಲ ಎಂದು ಹೇಳಿದ್ದಕ್ಕೆ ಗಂಡ ಪತ್ನಿಯ ಮೇಲೆ ಗುಂಡು ಹರಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸೆಪ್ಟೆಂಬರ್ 11 ರಂದು ತವರು ಮನೆಗೆ ಹೋಗಿದ್ದ ಪತ್ನಿಯನ್ನು ಕರೆಯಲು ಹೋಗಿದ್ದ ವೇಳೆ ಗಂಡನೇ ಹೆಂಡತಿ ಮೇಲೆ ಫೈರಿಂಗ್ ಮಾಡಿದದಾನೆ. ಪತ್ನಿ ಮೇಲೆ ಗುಂಡು ಹಾರಿಸಿದ ಶಿವಾನಂದನನ್ನು ಪೊಲೀಸರು ಬಂಧಿಸಿದ್ದಾರೆ.
4 ವರ್ಷದ ಹಿಂದ ಶಿವಾನಂದ, ಪ್ರೀತಿ ಮದುವೆಯಾಗಿತ್ತು. ಆದರೆ ಗಂಡ ಶಿವಾನಂದನ ಅನೈತಿಕ ಸಂಬಂಧ, ಕಿರುಕುಳಕ್ಕೆ ಬೇಸತ್ತು ಪ್ರೀತಿ ತವರು ಮನೆ ಸೇರಿದ್ರು. ಸೆ.11 ರ ರಾತ್ರಿ ಪ್ರೀತಿ ಅವರ ತವರು ಮನೆಗೆ ಬಂದ ಶಿವಾನಂದ ತನ್ನ ಜೊತೆಗೆ ಬರುವಂತೆ ಪಟ್ಟು ಹಿಡಿದಿದ್ದಾನೆ. ಆದರೆ ಪತ್ನಿ ಪ್ರೀತಿ ನಿನ್ನೆ ಜೊತೆಗೆ ಬರಲ್ಲ ಎಂದು ಹೇಳಿದಾಗ ಪಿಸ್ತೂಲ್ ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಅದೃಷ್ಟವಶಾತ್ ಪ್ರೀತಿ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SHOCKING NEWS: ಯುಪಿಯಲ್ಲಿ ಮೊಬೈಲ್ ಫೋನ್ ಬ್ಯಾಟರಿ ಸ್ಫೋಟ, 8 ತಿಂಗಳ ಮಗು ಸಾವು