ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರಿಗೂ ಕರಿದ ಹಸಿರು ಬಟಾಣಿ ಅಂದ್ರೆ ಎಲ್ಲಿಲ್ಲದ ಇಷ್ಟ. ಅದರಲ್ಲೂ ಮದ್ಯಪ್ರಿಯರಿಗೆ ಅಂತೂ ಸ್ನಾಕ್ಸ್ ರೂಪದಲ್ಲಿ ಹಲವು ತಿಂಡಿ ತಿನಿಸುಗಳು ಬೇಕಾಗುತ್ತವೆ. ಅದರಲ್ಲಿ ಕರಿದ ಹಸಿರು ಬಟಾಣಿ ಕೂಡ ಒಂದು. ಆದರೆ ಇದೀಗ ಈ ಒಂದು ಕರಿದ ಹಸಿರು ಬಟಾಣಿಯಲ್ಲಿ ಅಪಾಯಕಾರಿ ಕೃತಕ ಬಣ್ಣ ಪತ್ತೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಹೀಗಾಗಿ ಮುಖ್ಯಮಂತ್ರಿ ವಿಶೇಷ ಅಧಿಕಾರಿ ರಾಜ್ಯದ 70 ಕರೆದ ಬಟಾಣಿ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಿ ವರದಿ ನೀಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.
ಹೌದು ಕರಿದ ಹಸಿರು ಬಟಾಣಿ ಯಾರಿಗೆ ಇಷ್ಟ ಇಲ್ಲ ಹೇಳಿ. ಆದರೆ ಈಗ ಬಾಯಿ ಚಪ್ಪರಿಸಿ ತಿನ್ನುವ ಕರಿದ ಹಸಿರು ಬಟಾಣಿಯಲ್ಲಿ ಅಪಾಯಕಾರಿ ಕೃತಕ ಬಣ್ಣ ಹಾಕುತ್ತಾರೆ ಎನ್ನುವ ವಿಡಿಯೋ ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಹೀಗಾಗಿ ಇದನ್ನು ಗಂಭೀರವಾಗಿ ತೆಗೆದುಕೊಂಡ ಸಿಎಂ ವಿಶೇಷ ಅಧಿಕಾರಿಯ ಸೂಚನೆಯ ಮೇರೆಗೆ ಆಹಾರ ಸುರಕ್ಷತಾ ಇಲಾಖೆಯ ರಾಜ್ಯದಲ್ಲಿ 70 ಮಾದರಿ ಹಸಿರು ಬಟಾಣಿಗಳ ಸ್ಯಾಂಪಲ್ ಗಳನ್ನು ರವಾನೆ ಮಾಡಿದೆ.
ಈ ಅಪಾಯಕಾರಿ ಬಣ್ಣದಿಂದ ಸಾಕಷ್ಟು ಆರೋಗ್ಯದ ಸಮಸ್ಯೆ ಉದ್ಭವವಾಗಲಿದೆ. ಒಂದು ವೇಳೆ ಪ್ರಯೋಗಾಲಯದ ವರದಿಯಲ್ಲಿ ಕೃತಕ ಬಣ್ಣ ಬಳಸಿರುವುದು ಎಂದು ವರದಿ ಬಂದರೆ ಬಣ್ಣ ಬ್ಯಾನ್ ಆಗುವ ಸಾಧ್ಯತೆ ಇದೆ. ಅಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ. ರಾಜ್ಯದ ಮಾರಾಟ ಆಗುತ್ತಿರುವ ಹಸಿರು ಕರಿದ ಬಟಾಣಿಗಳ ಸ್ಯಾಂಪಲ್ ಕೆಲವೇ ದಿನಗಳಲ್ಲಿ ಅಧಿಕಾರಿಗಳ ಕೈ ಸೇರಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.