ಹಾಸನ : ಕವರ್ ನಲ್ಲಿ ನವಜಾತ ಶಿಶುವನ್ನು ಕಟ್ಟಿ ಚರಂಡಿಗೆ ಎಸೆದಿರುವ ಘಟನೆ ಹಾಸನ ಜಿಲ್ಲೆಯ ಹೇಮಾವತಿ ನಗರದಲ್ಲಿ ನಡೆದಿದೆ.
ನವಜಾತ ಶಿಶುವೊಂದನ್ನು ಕವರ್ ಕಟ್ಟಿಚರಂಡಿಗೆ ಬಿಸಾಡಿ ಹೋಗಿರುವ ಘಟನೆ ಹೇಮಾವತಿನಗರದಲ್ಲಿ ಬೆಳಕಿಗೆ ಬಂದಿದೆ. ಕಾರ್ಮೆಲ್ ಚರ್ಚ್ ಬಳಿಯ ಚರಂಡಿಯೊಳಗೆ ಹೆಣ್ಣು ನವಜಾತ ಶಿಶು ಪತ್ತೆಯಾಗಿದೆ.
ನವಜಾತ ಶಿಶುವಿನ ಶವವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ದೂರು ದಾಖಲಿಸಿದ್ದಾರೆ.