ಚಿತ್ರದುರ್ಗ : ಗಳಿಸಿರುವ ಹಣ, ಆಸ್ತಿಯನ್ನು ದುಂದು ವೆಚ್ಚ ಮಾಡಿ ಹಾಳು ಮಾಡಬೇಡ ಎಂದು ಪತ್ನಿ ಬುದ್ಧಿ ಹೇಳಿದಕ್ಕೆ ಕುಪಿತಗೊಂಡ ಪತಿರಾಯ ಒಬ್ಬ ಕತ್ತು ಹಿಸುಕಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಮೆದೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಶ್ರೀದೇವಿ (48) ಎಂದು ತಿಳಿದುಬಂದಿದೆ. ಇನ್ನು ಹತ್ಯೆಗೈದ ಪತಿಯನ್ನು ಉಮಾಪತಿ ಎಂದು ತಿಳಿದುಬಂದಿದೆ. ಉಮಾಪತಿ ತನ್ನ ಜಮೀನು ಮಾರಾಟದಿಂದಾಗಿ ಬಂದ ಹಣವನ್ನೆಲ್ಲಾ ಮನಬಂದಂತೆ ಖರ್ಚು ಮಾಡುತ್ತಾನೆಂಬ ಹಿನ್ನೆಲೆ ಪತ್ನಿ ಶ್ರೀದೇವಿ ಆಗಾಗ್ಗೆ ಎಚ್ಚರಿಸುತಿದ್ದಳು. ಈ ವಿಚಾರಕ್ಕೆ ಇಬ್ಬರ ಮಧ್ಯೆ ಕಲಹ ಆಗಾಗ ನಡೆಯುತ್ತಿತ್ತು.
ಇದರಿಂದ ಬೇಸತ್ತ ಪತ್ನಿ ಉಳಿದ ಜಮೀನು ಆದರೂ ನನ್ನ ಹಾಗೂ ಮಕ್ಕಳ ಹೆಸರಲ್ಲಿ ಮಾಡಿ ಎಂದು ಗಲಾಟೆ ಮಾಡುತ್ತಿದ್ದರು. ಇದರಿಂದಾಗಿ ಆಕ್ರೋಶಗೊಂಡ ಉಮಾಪತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸ್ಕೆಚ್ ಹಾಕಿ, ಫೆಬ್ರವರಿ 7 ರಂದು ಬೆಳಗ್ಗೆ ಶ್ರೀದೇವಿ ಮನೆಯಲ್ಲಿ ಪೂಜೆ ಮಾಡುತ್ತಿದ್ದಾಗ, ಆಕೆಯ ಸೀರೆಯಿಂದ ಕೊರಳಿಗೆ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಕೊಡಲೇ ಅಕ್ಕಪಕ್ಕದ ಮನೆಯವರನ್ನೆಲ್ಲಾ ಮನೆಗೆ ಕರೆದು, ನನ್ನ ಪತ್ನಿ ಪೂಜೆ ಮಾಡುವಾಗ ನೆಲಕ್ಕೆ ಬಿದ್ದಿದ್ದಾಳೆಂದು ನಂಬಿಸಿ ಆಸ್ಪತ್ರೆಗೆ ದಾಖಲಿಸಿದ್ದ.ಆದರೆ ಅಷ್ಟರಲ್ಲಗಲೇ ಶ್ರೀದೇವಿ ಸಾವನ್ನಪ್ಪಿದ್ದರು.ಘಟನೆ ಕುರಿತು ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಉಮಾಪತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ