ವಿಜಯಪುರ : ತವರು ಮನೆಯಿಂದ ಅಣ್ಣ ಆಸ್ತಿ ಕೊಡಲ್ಲ ಎಂದು ಹೇಳಿದಾಗ ತಾಯಿಯೊಬ್ಬಳು ತನ್ನ ನಾಲ್ವರು ಮಕ್ಕಳನ್ನು ಕಾಲುವಿಗೆ ಎಸೆದು ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ನಡುಗುಂದಿ ತಾಲೂಕಿನ ಬೇನಾಳ ಎಂಬ ಗ್ರಾಮದಲ್ಲಿ ನಡೆದಿದೆ.
ಹೌದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿ ಆಲಮಟ್ಟಿಯ ಎಡದಂಡೆ ಕಾಲುವೆಯಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ನಾಲ್ವರು ಮಕ್ಕಳನ್ನು ಕಾಲುವಿಗೆ ಎಸೆದ ಬಳಿಕ ತಾಯಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ.
ವಿಜಯಪುರ ಜಿಲ್ಲೆಯ ನೀಡಗುಂದಿ ತಾಲೂಕಿನ ಬೆನಾಳ ಗ್ರಾಮದ ಬಳಿ ಇರುವ ಆಲಮಟ್ಟಿ ಎಡದಂಡೆ ಕಾಲುವೆಯ ಬಳಿ ತಾಯಿಯೋಬ್ಬಳು ತನ್ನ ನಾಲ್ವರು ಮಕ್ಕಳನ್ನು ಮೊದಲು ಕಾಲುವಿಗೆ ಎಸೆದಿದ್ದಾಳೆ. ಬಳಿಕ ತಾನು ಕೂಡ ಮಕ್ಕಳು ಸಾವನ್ನಪ್ಪಿದ ಬಳಿಕ ತಾನು ಸಹ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಘಟನೆಯಲ್ಲಿ ತನು ನಿಂಗರಾಜ್ ಭಜಂತ್ರಿ (5) ರಕ್ಷಾ ನಿಂಗರಾಜ್ ಭಜಂತ್ರಿ (3) ಹುಸೇನ್ ನಿಂಗರಾಜ್ ಭಜಂತ್ರಿ ಹಾಗೂ ಹಸನ್ ಸೇರಿದಂತೆ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ನಿಡಗುಂದಿ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಕಾಲುವೆಯಲ್ಲಿ ಇಬ್ಬರೂ ಮಕ್ಕಳ ಶವ ಪತ್ತೆಯಾಗಿದ್ದು ಇನ್ನಿಬ್ಬರ ಮೃತದೇಹಕ್ಕಾಗಿ ಇದೀಗ ಪೊಲೀಸರು ಶೋಧ ಕಾರ್ಯ ಮುಂದುವರಿದಿದ್ದಾರೆ.
ಈ ಕುರಿತು ಮಹಿಳೆಯ ಪತಿ ನಿಂಗರಾಜ್ ಭಜಂತ್ರಿ ಮಾಧ್ಯಮಗಳೊಂದಿಗೆ ಮಾತನಾಡಿ, ಅಣ್ಣ ಆಸ್ತಿ ಕೊಡಲಿಲ್ಲ ಅಂತ ನನ್ನ ಪತ್ನಿ ಭಾಗ್ಯ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಾಲ್ಕು ಮಕ್ಕಳನ್ನು ಎಸೆದು ಕಾಲುವೆಗೆ ಭಾಗ್ಯ ಜಿಗಿದಿದ್ದಾಳೆ. ಆದರೆ ತಾಯಿ ಭಾಗ್ಯಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇಬ್ಬರು ಮಕ್ಕಳ ದುರ್ಮರಣ ಆಗಿದ್ದು, ಮತ್ತೆ ಇಬ್ಬರು ನೀರುಪಾಲಾಗಿದ್ದಾರೆ.
ನನ್ನ ಹೆಂಡತಿ ತವರು ಮನೆಯಲ್ಲಿ ಆಸ್ತಿ ಕೇಳಿದಾಗ ನನ್ನ ಹೆಂಡತಿಯನ್ನ ಅವರ ಅಣ್ಣ ಬಾಯಿಗೆ ಬಂದ ಹಾಗೆ ಬೈದರು. ನಿನಗೆ ಏನು ಆಸ್ತಿ ಕೊಡಲ್ಲ ಎಂದು ಹೀಯಾಳಿಸಿದರು. ಅದಕ್ಕೆ ಆಗಾಗ ಬಾವಿಗೆ ಬೀಳುವುದಕ್ಕೆ ನನ್ನ ಹೆಂಡತಿ ಹೋಗುತ್ತಿದ್ದಳು. ಇಂದು ಗಾಡಿ ನಿಲ್ಲಿಸಿ ಬರುವಷ್ಟರಲ್ಲಿ ಮಕ್ಕಳ ಸಮೇತ ಕಾಲುವೆಗೆ ಹಾರಿದ್ದಾಳೆ ಎಂದು ನಿಂಗರಾಜು ಹೇಳಿದ್ದಾನೆ.