ಕಾರ್ಕಳ : ಮನೆಯಲ್ಲಿ ಸೋಫಾದ ಮೇಲೆ ಚಾರ್ಜ್ ಇಟ್ಟ ಮೊಬೈಲ್ ಸ್ಪೋಟಗೊಂಡ ಪರಿಣಾಮ ಮನೆಗೆ ಬೆಂಕಿ ಬಿದ್ದಿರುವ ಘಟನೆ ಕಾರ್ಕಳ ಕಸಬ ವ್ಯಾಪ್ತಿಯ ಮರತ್ತಪ್ಪ ಶೆಟ್ಟಿ ಕಾಲೋನಿಯಲ್ಲಿ ನಡೆದಿದೆ.
ಮರತ್ತಪ್ಪ ಶೆಟ್ಟಿ ಕಾಲೋನಿಯಲ್ಲಿ ಸೋಫಾದ ಮೇಲೆ ಚಾರ್ಜ್‌ಗಿಟ್ಟ ಮೊಬೈಲ್ ಸ್ಫೋಟಗೊಂಡು ಮನೆಗೆ ಬೆಂಕಿ ವ್ಯಾಪಿಸಿದ್ದು, ಈ ಘಟನೆಯಿಂದ ಸುಮಾರು 7 ಲಕ್ಷ ರು. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಕಿಶೋರ್‌ಕುಮಾರ್‌ಶೆಟ್ಟಿ ಎಂಬವರ ಮನೆಯಲ್ಲಿ ಚಾರ್ಜ್‌ಗಿಟ್ಟಿದ್ದ ಮೊಬೈಲ್ ಸ್ಫೋಟಗೊಂಡಿದ್ದು, ಮನೆಯಲ್ಲಿ ಎಸಿ ಆನ್ ಇದ್ದ ಕಾರಣ ಬೆಂಕಿ ಮನೆ ತುಂಬೆಲ್ಲಾ ಆವರಿಸಿದೆ.
ಟಿವಿ, ಕಿಟಕಿ, ಫ್ಯಾನ್, ಮೊಬೈಲ್, ಇಂಟೀರಿಯರ್, ಸೋಫಾ ಸೇರಿದಂತೆ ವಿವಿಧ ಪಿಠೋಪಕರಣಗಳು ಬೆಂಕಿಗಾಹುತಿ ಯಾಗಿದೆ. ನಂತರ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.