ಮಂಡ್ಯ: ಇತ್ತೀಚೆಗೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರಲ್ಲೂ ಚಿಕ್ಕ ಮಕ್ಕಳು ಹಾಗೂ ಯುವಜನತೆ ಈ ಒಂದು ಹೃದಯಾಘಾತಕ್ಕೆ ಯಾಗುತ್ತಿದ್ದಾರೆ ಇದೀಗ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿ ಮೂರು ದಿನದ ಹಿಂದೆಯೇ ಮದುವೆಯಾಗಿದ್ದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೌದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮೂರು ದಿನದ ಹಿಂದೆ ಮದುವೆಯಾಗಿದ್ದ ಶಶಾಂಕ್ ಎನ್ನುವ ಯುವಕ ಹೃದಯಘಾತಕ್ಕೆ ಬಲಿಯಾಗಿದ್ದಾನೆ. ಪುರಸಭೆ ಸದಸ್ಯಕ್ಕೆ ಸಿ ಮಂಜುನಾಥ್ ಪುತ್ರ ಶಶಾಂಕ್ (28) ಸಾವನ್ನಪ್ಪಿದ್ದಾನೆ ಕಳೆದ ಭಾನುವಾರ ರಸ್ತೆ ಮೃತ ಶಶಾಂಕ್ ಹಸೆಮಣೆ ಏರಿದ್ದ ಜಾರ್ಖಂಡ್ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ನಿನ್ನೆ ಹೃದಯಾಘಾತದಿಂದ ಶಶಾಂಕ್ ಸಾವನಪ್ಪಿದ್ದಾನೆ.