ಮೈಸೂರು : ಶೌಚಾಲಯ ಗುಂಡಿಯನ್ನು ದುರಸ್ತಿ ಮಾಡುವ ಸಂದರ್ಭದಲ್ಲಿ ಗುಂಡಿಯಲ್ಲಿ ಮನುಷ್ಯನ ತಲೆ ಬುರುಡೆ ಹಾಗೂ ಕೈ ಕಾಲಿನ ಮೂಳೆಗಳು ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಜೋಂಪನಪಾಳ್ಯ ಎಂಬಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಜೋಂಪನಪಾಳ್ಯ ಎಂಬಲ್ಲಿ ದಾಸ್ ಪ್ರಕಾಶ್ ಎಂಬುವವರ ಮನೆಯ ಹಿತ್ತಲಿನ ಶೌಚಾಲಯ ಗುಂಡಿಯಲ್ಲಿ ಶೌಚಾಲಯದ ಗುಂಡಿ ದುರಸ್ತಿ ಮಾಡುತ್ತಿದ್ದರು. ಈ ವೇಳೆ ಅಲ್ಲಿ ತಲೆ ಬುರುಡೆ ಹಾಗು ದೇಹದ ಹಲವು ಮೂಳೆಗಳು ಪತ್ತೆಯಾಗಿವೆ.
ಏಳು ತಿಂಗಳ ಹಿಂದೆ ದಾಸ್ ಪ್ರಕಾಶ್ ಕಾಣೆಯಾಗಿದ್ದಾರೆ. ಮನೆ ಹಿಂದಿನ ಶೌಚಾಲಯ ಗುಂಡಿಯಲ್ಲಿ ಮೂಳೆ ಪತ್ತೆಯಾಗಿವೆ. ದಾಸ್ ಎನ್ನುವವನು ಕೂಲಿ ಕೆಲಸವನ್ನು ಮಾಡಿಕೊಂಡಿದ್ದಾರೆ ಇದುವರೆಗೂ ದಾಸ್ ಪ್ರಕಾಶ್ ಪತ್ತೆಯಾಗದೆ ಇರುವ ಹಿನ್ನೆಲೆ ತಲೆ ಬುರುಡೆ, ಮೂಳೆ ಅವನದ್ದೇ ಇರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.