ಹಾವೇರಿ : ಬಹು ಮಹಡಿ ಕಟ್ಟಡಗಳಲ್ಲಿ, ಅಪಾರ್ಟ್ಮೆಂಟ್ ಗಳಲ್ಲಿ, ಆಸ್ಪತ್ರೆ ಮತ್ತು ದೊಡ್ಡ ದೊಡ್ಡ ಕಂಪನಿಗಳಲ್ಲಿ ಲಿಫ್ಟ್ ಗಳ ವ್ಯವಸ್ಥೆ ಇರುತ್ತದೆ. ಆದರೆ ಕೆಲವು ಬಾರಿ ತಾಂತ್ರಿಕ ದೋಷಗಳಿಂದ ಲಿಫ್ಟ್ ಕೈ ಕೊಟ್ಟರೆ, ಜೀವಕ್ಕೆ ಆಪತ್ತು ಎದುರಾಗುವ ಸಂಭವಿವಿರುತ್ತದೆ ಇದೀಗ ಹಾವೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಕೂಡ ಇಂತಹದೇ ಘಟನೆ ನಡೆದಿದ್ದು ತಾಂತ್ರಿಕ ದೋಷಗಳಿಂದ ವ್ಯಕ್ತಿ ಒಬ್ಬ ಲಿಫ್ಟ್ ನಲ್ಲಿಯೇ ಸಿಲುಕಿ ಪರದಾಟ ನಡೆಸಿರುವ ಘಟನೆ ವರದಿಯಾಗಿದೆ.
ಹೌದು ವ್ಯಕ್ತಿಯೊಬ್ಬ ಸ್ಥಗಿತಗೊಂಡ ಲಿಫ್ಟ್ನಲ್ಲಿ ಸಿಲುಕಿ ಕೆಲಕಾಲ ಪರದಾಡಿದ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ರೋಗಿಯ ಜೊತೆಗೆ ಆಸ್ಪತ್ರೆಗೆ ಬಂದಿದ್ದ ಮಂಜುನಾಥ ಎಂಬವರು ಲಿಫ್ಟ್ನಲ್ಲಿ ಸಿಲುಕಿ ಗಾಬರಿಗೊಂಡಿದ್ದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಂಜುನಾಥ ಅವರನ್ನು ರಕ್ಷಣೆ ಮಾಡಿದೆ.
ಒಂದು ಮತ್ತು ಎರಡನೇ ಮಹಡಿ ಮಧ್ಯದಲ್ಲಿ ಲಿಫ್ಟ್ ಸ್ಥಗಿತಗೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಜಿಲ್ಲಾಸ್ಪತ್ರೆ ತಾಂತ್ರಿಕ ಸಿಬ್ಬಂದಿ ಲಿಫ್ಟ್ ಅನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಈ ಆಚಾತುರ್ಯ ನಡೆದಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.