ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೊವನ್ನು ನೋಡಿದರೆ ಬೆಚ್ಚಿ ಬೀಳೋದು ಪಕ್ಕಾ, ಹುಚ್ಚು ನಾಯಿ ಕಚ್ಚಿ ರೇಬೀಸ್‌ನಿಂದ ಬಳಲುತ್ತಿರುವ ವ್ಯಕ್ತಿ ನೀರು ಕುಡಿಯಲು ಭಯಪಡುತ್ತಿದ್ದಾನೆ.
ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಹೈಡ್ರೋಫೋಬಿಯಾ’ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿರುವ ರೋಗಿಯು ನೀರನ್ನು ನುಂಗಲು ಪ್ರಯತ್ನಿಸಿದಾಗ ಅಥವಾ ನೀರಿನ ಬಗ್ಗೆ ಯೋಚಿಸಿದಾಗ, ಅವನ ಗಂಟಲಿನ ಸ್ನಾಯುಗಳು ತೀವ್ರವಾಗಿ ಬಿಗಿಯಾಗುತ್ತವೆ ಮತ್ತು ಅವನು ಉಸಿರಾಡಲು ಸಾಧ್ಯವಿಲ್ಲ.
ರೇಬೀಸ್ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದ ನಂತರ, ಆ ವ್ಯಕ್ತಿ ಚೇತರಿಸಿಕೊಳ್ಳುವುದು ಅಸಾಧ್ಯ. ಸಣ್ಣ ನಿರ್ಲಕ್ಷ್ಯ ಅಥವಾ ಸರಿಯಾದ ಸಮಯದಲ್ಲಿ ರೇಬೀಸ್ ವಿರೋಧಿ ಲಸಿಕೆ ಪಡೆಯದಿರುವುದು ಎಷ್ಟು ಮಾರಕವಾಗಬಹುದು ಎಂಬುದಕ್ಕೆ ಈ ವೀಡಿಯೊ ಸಾಕ್ಷಿಯಾಗಿದೆ. ನಾಯಿ ಕಚ್ಚಿದ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ಜಗತ್ತಿಗೆ ತೋರಿಸಿದೆ.
Video depicts a man with rabies suffering from hydrophobia. The disease induces severe throat spasms, both when trying to swallow and even at the thought of swallowing. Rabies is almost always fatal once clinical symptoms emerge. pic.twitter.com/t0hWkJtYCx
— Morbid Knowledge (@MorbidKnowledge) January 3, 2026








