ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದ ವೇಳೆ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಶ್ರೀಸತ್ಯಸಾಯಿ ಜಿಲ್ಲೆಯ ಕೆಪಿಎಚ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕದಿರಿ ಮಂಡಲದ ಕೆ.ವಿಷ್ಣುವರ್ಧನ್ ಕೆಪಿಎಚ್ಬಿಯ ಹಾಸ್ಟೆಲ್ನಲ್ಲಿದ್ದು ನಗರದಲ್ಲಿ ಖಾಸಗಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ.
గుండెపోటుతో గుడిలోనే ప్రాణాలొదిలిన 31ఏళ్ల వ్యక్తి..
KBHPలో టెంపుల్ బస్ స్టాప్ సమీపంలోని ఆంజనేయస్వామి గుడిలో ప్రదక్షిణలు చేస్తుండగా గుండెపోటు
విష్ణువర్ధన్(31) సోమవారం(నవంబర్ 11) ఉదయం ఆంజనేయ స్వామి దేవాలయానికి వెళ్లాడు. pic.twitter.com/uldjs5UyaK— Mr. Mohan (@kundenapally_12) November 12, 2024
ನಿತ್ಯವೂ ವೀರಾಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿ ಆಂಜನೇಯನ ದರ್ಶನ ಮಾಡುವ ಪದ್ಧತಿ ಇದೆ. ಬೆಳಗ್ಗೆ ದೇವಸ್ಥಾನಕ್ಕೆ ಬಂದು ಪ್ರದಕ್ಷಿಣೆ ಹಾಕಿ ನೀರು ಕುಡಿಯಲು ಬಂದು ಅಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. ಆರೋಗ್ಯ ಸಮಸ್ಯೆಗಳ ಜೊತೆಗೆ ಇತ್ತೀಚೆಗೆ ಅವರು ವೈರಲ್ ಜ್ವರದಿಂದ ಬಳಲುತ್ತಿದ್ದರು ಎಂದು ತಿಳಿದಿದೆ. ಪೊಲೀಸರು ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.