ಇಟಲಿ: ಸುಮಾರು 35 ವರ್ಷ ವಯಸ್ಸಿನ ವ್ಯಕ್ತಿ ವಿಮಾನ ನಿಲ್ದಾಣದ ರನ್ವೇಗೆ ಓಡಿ ನಿರ್ಗಮನಕ್ಕೆ ಸಿದ್ಧವಾಗಿದ್ದ ವೊಲೊಟಿಯಾ ಏರ್ಬಸ್ ಎ 319 ನ ಎಂಜಿನ್ಗೆ ಎಳೆಯಲ್ಪಟ್ಟಿದ್ದಾನೆ ಎಂದು ವರದಿಯಾಗಿದೆ.
ಮಿಲನ್ ನ ಒರಿಯೊ ಅಲ್ ಸೆರಿಯೊ ವಿಮಾನ ನಿಲ್ದಾಣದಲ್ಲಿ ವಿಮಾನದ ಎಂಜಿನ್ ಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮಂಗಳವಾರ ಬೆಳಿಗ್ಗೆ ಈ ದುರಂತ ಘಟನೆ ನಡೆದಿದ್ದು, ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇಟಾಲಿಯನ್ ದಿನಪತ್ರಿಕೆ ಕೊರಿಯರ್ ಡೆಲ್ಲಾ ಸೆರಾ ಪ್ರಕಾರ, ಸುಮಾರು 35 ವರ್ಷ ವಯಸ್ಸಿನ ವ್ಯಕ್ತಿ ವಿಮಾನ ನಿಲ್ದಾಣದ ರನ್ವೇಗೆ ಓಡಿ ನಿರ್ಗಮನಕ್ಕೆ ಸಿದ್ಧವಾಗಿದ್ದ ವೊಲೊಟಿಯಾ ಏರ್ಬಸ್ ಎ 319 ನ ಎಂಜಿನ್ಗೆ ಎಳೆಯಲ್ಪಟ್ಟಿದ್ದಾನೆ ಎಂದು ವರದಿಯಾಗಿದೆ. ಆ ವ್ಯಕ್ತಿ ಪ್ರಯಾಣಿಕನೇ ಅಥವಾ ವಿಮಾನ ನಿಲ್ದಾಣದ ಸಿಬ್ಬಂದಿಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.