ಲಕ್ನೋ : ಪೊಲೀಸರು ಎಫ್ ಐಆರ್ ದಾಖಲಿಸಲು ನಿರಾಕರಿಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಕಚೇರಿಯ ಗೇಟ್‌ನಲ್ಲಿ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಕಚೇರಿಯ ಗೇಟ್‌ನಲ್ಲಿ ಬೆಂಕಿ ಹಚ್ಚಿಕೊಂಡು ಗಲ್ಫಾಮ್ ಎಂಬ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ವ್ಯಕ್ತಿಯನ್ನು ರಕ್ಷಿಸಲು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಎರಡು ದಿನಗಳ ಹಿಂದೆ ನನ್ನಿಂದ ಇ-ರಿಕ್ಷಾ ಮತ್ತು 2,200 ರೂ. ಪದೇ ಪದೇ ಮನವಿ ಮಾಡಿದರೂ ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದರು,’’ ಎಂದು ಆರೋಪಿಸಿದರು. ಗುಲ್ಫಾಮ್ ಸರ್ಕಲ್ ಆಫೀಸರ್ (ಸಿಒ) ತನ್ನ ದೂರನ್ನು ಮುಂದುವರಿಸಿದರೆ ಡ್ರಗ್ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಘಟನೆಯ ಕುರಿತು ಪೊಲೀಸರು ಸ್ಪಷ್ಟನೆ ನೀಡಿದ್ದು, ವೈಯಕ್ತಿಕ ವಿಷಯದಿಂದಾಗಿ ಗಲ್ಫಾಮ್ ಒತ್ತಡದಲ್ಲಿದ್ದ. ಒಂದು ದಿನದ ಹಿಂದೆ ಗಲ್ಫಾಮ್‌ನ ಮಹಿಳಾ ಸಂಬಂಧಿಯೊಬ್ಬರು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು ಎಂದು ತಿಳಿಸಿದ್ದಾರೆ.
उत्तर प्रदेश : जिला बदायूं में SSP दफ्तर के गेट पर गुलफाम ने खुद को आग लगाई। पुलिस ने आग बुझाकर हॉस्पिटल में भर्ती कराया।
गुलफाम ने बताया– 2 दिन पहले मुझसे ई रिक्शा, 2200 रुपए छीन लिए गए। पुलिस ने FIR नहीं की। CO ने डोडा लगाकर जेल भेजने की धमकी दी।
वहीं, पुलिस का कहना है कि… pic.twitter.com/TiIbzgN0e8
— Sachin Gupta (@SachinGuptaUP) January 1, 2025