ನಾಗ್ಪುರ : ಮಹಿಳೆಯರ ಮೇಲೆ ಯುವತಿಯರ ಮೇಲೆ ಹಾಗೂ ಪುಟ್ಟ ಪುಟ್ಟ ಮಕ್ಕಳ ಮೇಲೆ ಅತ್ಯಾಚಾರ ಲೈಂಗಿಕ ದೌರ್ಜನ್ಯ ಎಸುಗುತ್ತಿದ್ದ ಕಾಮಾಂಧರು ಇದೀಗ ಪ್ರಾಣಿಗಳನ್ನು ಸಹ ಬಿಡುತ್ತಿಲ್ಲ. ಹೌದು ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕುದುರೆ ಸವಾರಿ ಅಕಾಡೆಮಿಯಲ್ಲಿ ಕುದುರೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕಳೆದ ಮೇ 17ರಂದು ನಾಗ್ಪುರದ ಗಿಟ್ಟಿಖಾದನ್ ಪ್ರದೇಶದ ಕುದುರೆ ಸವಾರಿ ಅಕಾಡೆಮಿಯಲ್ಲಿ ಈ ಘಟನೆ ನಡೆದಿದೆ.ರಾತ್ರಿ ವೇಳೆ ಅಕ್ರಮವಾಗಿ ಅಕಾಡೆಮಿ ಪ್ರವೇಶಿಸಿದ ಆರೋಪಿ ಕುದುರೆಯೊಂದರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಸಂಬಂಧ ಕುದುರೆ ಅಕಾಡೆಮಿಯ ಮಾಲೀಕರು ದೂರು ನೀಡಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿ ಚೋಟ್ಯಾ ಸುಂದರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.