ಬೆಂಗಳೂರು : ಬೆಂಗಳೂರಿನ ಮಡಿವಾಳದಲ್ಲಿರುವ ಸಂಧ್ಯಾ ಥಿಯೇಟರ್‌ನ ಮಹಿಳಾ ಶೌಚಾಲಯದಲ್ಲಿ ವಿಕೃತಕಾಮಿಯೊಬ್ಬ ಗುಪ್ತ ಕ್ಯಾಮರಾ ಇಟ್ಟಿದ್ದ ಘಟನೆ ನಡೆದಿದೆ. ‘ನುವ್ವು ನಾಕು ನಚ್ಚಾವ್’ ಸಿನಿಮಾ ನೋಡಲು ಬಂದಿದ್ದ ಮಹಿಳೆಯರು ಇದನ್ನು ಪತ್ತೆಹಚ್ಚಿ, ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೌದು ಲೇಡೀಸ್ ಟಾಯ್ಲೆಟ್ ರೂಮ್ನಲ್ಲಿ ಕ್ಯಾಮೆರಾ ಇಟ್ಟು ಯುವಕನೊಬ್ಬ ವಿಕೃತಿ. ಮೇರೇದಿದ್ದಾನೆ. ವಾಶ್‌ರೂಮ್ ಗೆ ಹೋಗಿದ್ದ ಮಹಿಳೆ ಹಾಗೂ ಯುವತಿಯರು ಕ್ಯಾಮೆರಾ ಕಂಡು ಶಾಕ್ ಆಗಿದ್ದಾರೆ. ಬೆಂಗಳೂರಿನ ಮಡಿವಾಳದ ಸಂಧ್ಯಾ ಥಿಯೇಟರ್ ನಲ್ಲಿ ಈ ಒಂದು ಘಟನೆ ನಡೆದಿದೆ. ಆರೋಪಿಯನ್ನು ಹಿಡಿದು ಸ್ಥಳೀಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ಈ ಘಟನೆ ನಡೆದಿದೆ. ವಿಕೃತಕಾಮಿಯೊಬ್ಬ ಲೇಡಿಸ್ ಟಾಯ್ಲೆಟ್ ಒಳಗೆ ಗುಪ್ತವಾಗಿ ಕ್ಯಾಮರಾ ಅಳವಡಿಸಿದ್ದನು. ವಾಶ್ ರೂಮ್‌ಗೆ ಹೋದ ಮಹಿಳೆಯರು ಮತ್ತು ಯುವತಿಯರು ಇದನ್ನು ಗಮನಿಸಿ ತಕ್ಷಣವೇ ಹೊರಬಂದು ಕಿರುಚಾಡಿದ್ದಾರೆ. ಇದರಿಂದ ಥಿಯೇಟರ್ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.








