ಬೆಂಗಳೂರು : ರಾಜ್ಯದಲ್ಲಿ ಇನ್ನು ಸಹ ಜೀತ ಪದ್ಧತಿ ಜೀವಂತವಾಗಿದ್ದು, ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಗುಂಜೂರು ಬಳಿ 8 ಬಾಲಕರು ಸೇರಿದಂತೆ 35 ಕಾರ್ಮಿಕರನ್ನು ರಕ್ಷಿಸಲಾಗಿದೆ. ಅತ್ತಿಬೆಲೆ ಹೋಬಳಿಯ ಉಪ ತಹಸೀಲ್ದಾರ್ ನವೀನ್ ಕುಮಾರ್ ಹಾಗು ಕಾರ್ಮಿಕ ಇಲಾಖೆ ಅಧಿಕಾರಿಗಳು, ಪೊಲೀಸ್ NGO ಸಿಬ್ಬಂದಿ ದಾಳಿ ಮಾಡಿದ್ದಾರೆ.
ಹೌದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಗುಂಜೂರು ಬಳಿ 8 ಬಾಲಕರು ಸೇರಿದಂತೆ 35 ಕಾರ್ಮಿಕರನ್ನು ರಕ್ಷಿಸಲಾಗಿದೆ. ತೆಲಂಗಾಣದ ವನಪರ್ತಿ ಜಿಲ್ಲೆಯಿಂದ 36 ಕಾರ್ಮಿಕರನ್ನು ಕರೆತಂದಿದ್ರು. ಗುತ್ತಿಗೆದಾರ ಹಣ ನೀಡಿ ಕಾರ್ಮಿಕರನ್ನು ಖರೀದಿಸಿ ಜೀತಕ್ಕೆ ಕರೆತಂದಿದ್ದ.
ಅತ್ತಿಬೆಲೆ, ಗುಂಜೂರು ಭಾಗದಲ್ಲಿ 2 ಗುಂಪುಗಳಾಗಿ ಇರಿ ಜೀತ ಪದ್ಧತಿ ನಡೆಸಲಾಗುತ್ತಿತ್ತು. ಅತ್ತಿಬೆಲೆ ಬಳಿ ಮೂವರು ಬಾಲಕರು ಸೇರಿದಂತೆ 11 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಇನ್ನು ಗುಂಜೂರು ಗ್ರಾಮದ ಬಳಿ 24 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ರಾಮನಾಗಪ್ಪ ಶೆಟ್ಟಿ ಇನ್ಸ್ಪಾಸ್ಟೈಕ್ಚರ್ ಕಂಪನಿಯಲ್ಲಿ ಜೀತದಾಳಾಗಿ ಕೆಲಸ ಮಾಡುತ್ತಿದ್ದರು.
ಯಾಕೂಬ್ ಎಂಬಾತ ರ್ನ್ಸ್ ಕಂಪನಿಯಿಂದ ಸಬ್ ಕಾಂಟ್ರಾಕ್ಟ್ ಪಡೆದಿದ್ದ. 1 ಕುಟುಂಬಕ್ಕೆ 1 ವರ್ಷಕ್ಕೆ 1,60,000 ಹಣ ನೀಡಿ ಖರೀದಿ ಮಾಡಿದ್ದರು. ಇದೀಗ ಅತ್ತಿಬೆಲೆ ಬಳಿ ಮೂವರು ಬಾಲಕರು ಸೇರಿದಂತೆ 11 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಇನ್ನು ಗುಂಜೂರು ಗ್ರಾಮದ ಬಳಿ 24 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.