ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಡೆಲಿವರಿ ಬಾಯ್ ನಿಂದ ಮಾಡೆಲ್ ಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಬ್ರೆಜಿಲ್ ಮೂಲದ ಮಾಡೆಲ್ ಗೆ ಡೆಲಿವರಿ ಬಾಯ್ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.
ಬ್ಲಿಂಕಿಂಟ್ ಡೆಲಿವರಿ ಬಾಯ್ ಕುಮಾರರಾವ್ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದು, ಫುಡ್ ಡೆಲಿವರಿ ಕೊಡಲು ಬಂದಿದ್ದಾಗ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಆರ್ ಟಿ ನಗರದಲ್ಲಿರುವ ಮಾಡೆಲ್ ಮನೆಯಲ್ಲಿಯೇ ಲೈಂಗಿಕ ಕಿರುಕುಳ ನೀಡಿದ್ದು, ಸೆಪ್ಟೆಂಬರ್ 17ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ..
ಕುಮಾರ್ ರಾವ್ ಕಾಲೇಜು ವಿದ್ಯಾರ್ಥಿಯಾಗಿದ್ದು ಪಾರ್ಟ್ ಟೈಮ್ ಆಗಿ ಬ್ಲಿಂಕ್ ಇಟ್ ಡೆಲಿವರಿ ಮಾಡುತ್ತಿದ್ದ. ಸಂತ್ರಸ್ತೇ ಕೆಲಸ ಮಾಡುತ್ತಿದ್ದ ಕಂಪನಿ ಮ್ಯಾನೇಜರ್ ಕಾರ್ತಿಕ್ ದೂರು ನೀಡಿದ್ದಾರೆ. ಕುಮಾರ್ ರಾವ್ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಕುಮಾರ ರಾವ್ ಬಂಧಿಸಿ ಆರ್ ಟಿ ನಗರ ಪೊಲೀಸ್ರು ವಿಚಾರಣೆ ನಡೆಸುತ್ತಿದ್ದಾರೆ.








