ಕಲಬುರ್ಗಿ : ಮಹಿಳೆ ಒಬ್ಬರು ತೀವ್ರವಾಗಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ವೇಳೆ ಹೊಟ್ಟೆ ನೋವು ನಿವಾರಕ ಔಷಧಿ ಎಂದು ತಿಳಿದು ಮಹಿಳೆ ಕುರಿ ಹೇನಿನ ಔಷಧಿ ಕುಡಿದು ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಹೊರವಲಯದ ಫರತಾಬಾದ್ ನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಫರಹತಾಬಾದ್ ನಿವಾಸಿ ಶಿವಮ್ಮ ಸಿದ್ದು ಎಂದು ತಿಳಿದುಬಂದಿದೆ. ಕಳೆದ ಐದು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಮಾ.7ರ ರಾತ್ರಿ ತೀವ್ರ ಹೊಟ್ಟೆ ನೋವಿನಿಂದ ಹೊಟ್ಟೆ ನೋವು ನಿವಾರಕ ಔಷಧಿ ಎಂದುಕೊಂಡು ಕುರಿ ಹೇನಿನ ಔಷಧಿಯನ್ನು ಕುಡಿದಿದ್ದಾರೆ.
ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮಾರ್ಗ ಮಧ್ಯದಲ್ಲಿ ಶಿವಮ್ಮ ಅವರು ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.