ಹುಬ್ಬಳ್ಳಿ : ಕಳೆದ ಹಲವು ತಿಂಗಳು ಹಿಂದೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ಕೊಲೆ ಇಡೀ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕಿಗೆ ಪುಂಡರು ಬೈಕ್ ಮೇಲೆ ಬೆನ್ನು ಹತ್ತಿ ಕಿರುಕುಳ ನೀಡಿರುವ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು ಹುಬ್ಬಳ್ಳಿ ನಗರದಲ್ಲಿ ಬೀದಿ ಕಾಮಣ್ಣರ ಕಾಟ ಹೆಚ್ಚಾಗಿದ್ದು, ಬಾಲಕಿ ಬೆನ್ನು ಬಿದ್ದು ಪುಂಡರು ಚುಡಾಯಿಸಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಬೀದಿ ಕಾಮಣ್ಣರ ಕಾಟಕ್ಕೆ ಬಾಲಕಿ ತಪ್ಪಿಸಿಕೊಂಡು ಓಡಿ ಹೋಗಿರುವ ಘಟನೆ ನಡೆದಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು ಟ್ಯೂಷನ್ ಮುಗಿಸಿಕೊಂಡು ಬಾಲಕಿ ಮನೆಗೆ ತೆರಳುತ್ತಿದ್ದ ವೇಳೆ ಪುಂಡರು ಬೈಕ್ ಹತ್ತಿ ಬಾಲಕಿಗೆ ಚುಡಾಯಿಸಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಈ ಒಂದು ಘಟನೆಯ ದೃಶ್ಯ ಸೆರೆಯಾಗಿದೆ.
ಬಾಲಕಿಯನ್ನು ಪುಂಡರು ಬೆನ್ನು ಹತ್ತಿರುವ ದೃಶ್ಯ ಎರಡು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇವಳೆ ಸ್ಥಳೀಯರೊಬ್ಬರು ಬಾಲಕಿಯನ್ನು ಯಾಕೆ ಬೆನ್ನು ಹತ್ತಿ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಪುಂಡರು ಅಲ್ಲಿಂದ ಪರಾರಿಯಾಗಿದ್ದಾರೆ. ಕಳೆದ 15 ದಿನಗಳಿಂದ ಬಾಲಕಿಯ ನಡೆಯನ್ನು ಗುರುತಿಸಿ ನಿನ್ನೆ ಬಾಲಕಿಯನ್ನು ಫಾಲೋ ಮಾಡಿ ಬಾಲಕಿಗೆ ಬೆನ್ನು ಹತ್ತಿದ್ದಾರೆ. ಆರೋಪಿಗಳು ಹುಬ್ಬಳ್ಳಿಯ ಅಯೋಧ್ಯ ನಗರದ ನಿವಾಸಿಗಳೆಂದು ತಿಳಿದು ಬಂದಿದೆ. ಸದ್ಯ ಪೋಲೀಸರು ಇಬ್ಬರು ಯುವಕರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.