ರಾಮನಗರ : ಅಪಘಾತ ಒಂದರಲ್ಲಿ ಅಳಿಯ ಸಾವನಪ್ಪಿರುವ ಸುದ್ದಿಯನ್ನು ಕೇಳಿ ಸೋದರತ್ತೆಯು ಕೂಡ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಶಿವನಹಳ್ಳಿಯಲ್ಲಿ ನಡೆದಿದೆ.
ಶಿವನಹಳ್ಳಿ ಗ್ರಾಪಂ ಬಿಲ್ ಕಲೆಕ್ಟರ್ ನಾಗೇಶ್(42) ಅಪಘಾತದಲ್ಲಿ ಸಾ*ವಿಗೀಡಾಗಿದ್ದರೆ, ಅವರ ಸೋದರತ್ತೆ ಶಿವರುದ್ರಮ್ಮ(63) ಸುದ್ದಿ ತಿಳಿಯುತ್ತಿದ್ದಂತೆ ಆಘಾತಗೊಂಡು ಸಾವಿಗೀಡಾಗಿದ್ದಾರೆ. ಭಾನುವಾರ ಮೇಲುಕೋಟೆಯಲ್ಲಿ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ಮೇಲು ಕೋಟೆಗೆ ಹೋಗಿದ್ದರು.ಮದುವೆ ಮುಗಿಸಿ ಹಿಂದಿರುಗುತ್ತಿರುವಾಗ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ನಾಗೇಶ್ ಸ್ಥಳದಲ್ಲೇ ಸಾವಿಗೀಡಾದರೆ, ಇವರ ಪತ್ನಿ ನೀಲಮ್ಮ ಪ್ರಜ್ಞೆ ಕಳೆದುಕೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನಾಗೇಶ್ ಅಪಘಾತದಲ್ಲಿ ಸಾ*ವಿಗೀಡಾದ ಸುದ್ದಿ ತಿಳಿಯುತ್ತಿದ್ದಂತೆ ಇತ್ತ ಶಿವನಹಳ್ಳಿ ಗ್ರಾಮದಲ್ಲಿ ಇವರ ಸೋದರತ್ತೆ ಶಿವರುದ್ರಮ್ಮ ತೀವ್ರ ಆಘಾತಗೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿತ್ತಾದರೂ ಕೂಡ ಶಿವರುದ್ರಮ್ಮ ಹೃದಯಾಘಾತದಿಂದ ಸಾವನಪ್ಪಿದ್ದಾರೆ.