ಮಂಡ್ಯ: ಜಿಲ್ಲೆಯಲ್ಲಿ ರಾಜ್ಯದಲ್ಲೇ ಬೆಚ್ಚಿ ಬೀಳಿಸೋ ಕೃತ್ಯ ಎನ್ನುವಂತೆ ಬಟ್ಟೆ ತೊಳೆಯೋದಕ್ಕೆ ತೆರಳಿದ್ದಂತ ಮಹಿಳೆಯನ್ನು ಕೊಲೆ ಮಾಡಿರುವಂತ ಘಟನೆ ನಡೆದಿದೆ. ಈ ಕೃತ್ಯದ ಹಿಂದೆ ಚಿನ್ನಕ್ಕಾಗಿ ಮಹಿಳೆ ಕೊಲೆ ಮಾಡಿರುವಂತ ಶಂಕೆ ವ್ಯಕ್ತವಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪಾಲಹಳ್ಳಿಯ ಮಮತಾ (35) ಮೃತ ಮಹಿಳೆಯಾಗಿದ್ದಾರೆ. ಬಟ್ಟೆ ತೊಳೆಯಲು ವರುಣಾ ನಾಲೆಗೆ ಮಮತಾ ತೆರಳಿದ್ದರು. ಪಾಲಹಳ್ಳಿ ಬಳಿಯ ಕ್ಯೂಟ್ ರೆಸಾರ್ಟ್ ಬಳಿಯ ವರುಣ ನಾಲೆಗೆ ಮಮತಾ ಹೋಗಿದ್ದರು. ಇಂತಹ ಮಮತಾ ಕಾಲುವೆಯಲ್ಲಿ ಕೊಲೆಯಾಗಿ ಮೃತಪಟ್ಟಿರುವ ರೀತಿಯಲ್ಲಿ ಶವ ಪತ್ತೆಯಾಗಿದೆ.
ಶವದ ಮೈಯಲ್ಲಿದ್ದ ಚಿನ್ನದ ಸರ, ತಾಳಿಸರ, ಕಿವಿಯಲ್ಲಿದ್ದ ಓಲೆ ಬಲವಂತವಾಗಿ ಕಿತ್ತುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಬಟ್ಟೆ ತೊಳೆಯಲು ಹೋದವರು ಬರುವುದು ತಡವಾದ್ದರಿಂದ ಪತಿಯಿಂದ ಹುಡುಕಾಟದ ವೇಳೆಯಲ್ಲಿ ಮಮತಾ ಶವವಾಗಿ ಪತ್ತೆಯಾಗಿದ್ದಾರೆ.
ಮೇಲ್ನೋಟಕ್ಕೆ ಯಾರೋ ದುಷ್ಕರ್ಮಿಗಳು ಚಿನ್ನಕ್ಕಾಗಿ ಮಹಿಳೆಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಶ್ರೀರಂಗಪಟ್ಟಣ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ, ತನಿಖೆ ಕೈಗೊಂಡಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ; ಗಿರೀಶ್ ರಾಜ್, ಮಂಡ್ಯ








