Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡದಿದ್ದರೆ, ಸಚಿವ ಸ್ಥಾನವೇ ಬೇಡ : ರಾಮಲಿಂಗಾರೆಡ್ಡಿ ಅಸಮಾಧಾನ

BREAKING : ಬಳ್ಳಾರಿಯಲ್ಲಿ ಭೀಕರ ಅಪಘಾತ : ಮೈನಿಂಗ್ ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ-ಮಗ ದುರ್ಮರಣ!

GOOD NEWS : 2500 ಅಡಿ ವಸತಿ ಕಟ್ಟಡಗಳಿಗೆ ಒಂದು ಬಾರಿಯ ‘ಸ್ವಾಧೀನಾನುಭವ ಪ್ರಮಾಣಪತ್ರ’ ವಿನಾಯಿತಿ : ಸಿಎಂ ಡಿಕೆಶಿ ಘೋಷಣೆ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
KARNATAKA

ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

By kannadanewsnow57
vidhana soudha
vidhana soudha

ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಆಹಾರ ವಾಹಿನಿ(ಆಹಾರ ಕಿಯೋಸ್ಕ್) ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.

ಆಹಾರ ವಾಹಿನಿ(ಆಹಾರ ಕಿಯೋಸ್ಕ್) ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇಗಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಾಗಿದೆ.  ನಿಗಮದಿಂದ ವಾಹನ ಖರೀದಿಗೆ ರೂ.3.00 ಲಕ್ಷಗಳ  ಸಹಾಯಧನವನ್ನು ಬಿಡುಗಡೆ ಮಾಡಲಾಗುವುದು.  ಉಳಿಕೆ ಮೊತ್ತವನ್ನು ಬ್ಯಾಂಕ್ ಗಳು/ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬಹುದಾಗಿರುತ್ತದೆ.

ನಗರ ಪ್ರದೇಶದ ವಿಧಾನಸಭಾ ಕ್ಷೇತ್ರವಾದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಹಿಂದುಳಿದ ವರ್ಗಗಳಲ್ಲಿ ಬರುವ ಮಡಿವಾಳ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಸೌಲಭ್ಯ ಪಡೆಯಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-2 ಗೆ ಸೇರಿದವರಾಗಿರಬೇಕು.  ಕುಟುಂಬದ ವಾರ್ಷಿಕ ವರಮಾನ ರೂ. 3 ಲಕ್ಷ ಒಳಗಿರಬೇಕು.  ಅರ್ಜಿದಾರರ ವಯಸ್ಸು 21 ರಿಂದ 45 ವರ್ಷಗಳ ಮಿತಿಯಲ್ಲಿರಬೇಕು.

ಈ ಯೋಜನೆಗಳಡಿಯಲ್ಲಿ ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-2ಎ ರಲ್ಲಿ ಮಡಿವಾಳ ಮತ್ತು ಇದರ ಉಪ ಜಾತಿಗಳಾದ ಅಗಸ, ಚಕಲ, ಧೋಬಿ, ಮಡಿವಾಳ, ಮನ್ನನ್, ಪರಿತ್, ರಾಜಕ, ಸಕಲ, ವನ್ನನ್, ವೆಲ್ಲುತೇಡನ್ ಮತ್ತು ಸಾಕಲವಾಡು ಜಾತಿಗಳಿಗೆ ಸೇರಿದವರಾಗಿರಬೇಕು.

ಈ ಯೋಜನೆಗಳಡಿಯಲ್ಲಿ ಸೌಲಭ್ಯ ಒದಗಿಸಲು ಸೇವಾ ಸಿಂಧು ತಂತ್ರಾಂಶದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್ ನಲ್ಲಿರುವಂತೆ ಅರ್ಜಿದಾರರ ಹೆಸರು (ಶ್ರೀ/ಶ್ರೀಮತಿ ಕುಮಾರಿ ಮುಂತಾದ ದಾಖಲಾತಿಗಳೆಲ್ಲವು) ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದಲ್ಲಿಯೂ ಇದ್ದು, ಹೊಂದಾಣಿಕೆಯಾಗಬೇಕು.

ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಈ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗಗಳ ಪ್ರವರ್ಗ-2ಎ ಯಲ್ಲಿ ಬರುವ ಮಡಿವಾಳ ಜಾತಿಗೆ ಸೇರಿದ ಅರ್ಜಿದಾರರು ಅರ್ಜಿಗಳನ್ನು ಸೇವಾಸಿಂಧು ಪೆÇೀರ್ಟಲ್ https://sevasindhu.karnataka.gov.in  ಮುಖಾಂತರ ಗ್ರಾಮಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.  ಅರ್ಜಿ ಸಲ್ಲಿಸಲು ಮಾರ್ಚ್ 6 ಕೊನೆ ದಿನವಾಗಿದೆ.

ಯೋಜನೆಯ ಅರ್ಹತೆ ಮತ್ತು ಸಲ್ಲಿಸುವ ದಾಖಲಾತಿಗಳ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ವೆಬ್‍ಸೈಟ್ www.kmmdc.karnataka.gov.in ಇಲ್ಲಿ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಅಥವಾ ನಿಗಮದ ಸಹಾಯವಾಣಿ ಸಂಖ್ಯೆ: 080-22374832, 8050770004 ಮತ್ತು 8050770005 ಅಥವಾ ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(ನಿ), ಕೊಡಗು ಜಿಲ್ಲೆ, ಮಡಿಕೇರಿ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08272-221656 ರ ಮೂಲಕ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.

Karnataka Madiwala Machideva Development Corporation invites applications for various projects
Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡದಿದ್ದರೆ, ಸಚಿವ ಸ್ಥಾನವೇ ಬೇಡ : ರಾಮಲಿಂಗಾರೆಡ್ಡಿ ಅಸಮಾಧಾನ

1 Min Read

BREAKING : ಬಳ್ಳಾರಿಯಲ್ಲಿ ಭೀಕರ ಅಪಘಾತ : ಮೈನಿಂಗ್ ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ-ಮಗ ದುರ್ಮರಣ!

1 Min Read

GOOD NEWS : 2500 ಅಡಿ ವಸತಿ ಕಟ್ಟಡಗಳಿಗೆ ಒಂದು ಬಾರಿಯ ‘ಸ್ವಾಧೀನಾನುಭವ ಪ್ರಮಾಣಪತ್ರ’ ವಿನಾಯಿತಿ : ಸಿಎಂ ಡಿಕೆಶಿ ಘೋಷಣೆ.!

1 Min Read
Recent News

BREAKING : ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡದಿದ್ದರೆ, ಸಚಿವ ಸ್ಥಾನವೇ ಬೇಡ : ರಾಮಲಿಂಗಾರೆಡ್ಡಿ ಅಸಮಾಧಾನ

BREAKING : ಬಳ್ಳಾರಿಯಲ್ಲಿ ಭೀಕರ ಅಪಘಾತ : ಮೈನಿಂಗ್ ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ-ಮಗ ದುರ್ಮರಣ!

GOOD NEWS : 2500 ಅಡಿ ವಸತಿ ಕಟ್ಟಡಗಳಿಗೆ ಒಂದು ಬಾರಿಯ ‘ಸ್ವಾಧೀನಾನುಭವ ಪ್ರಮಾಣಪತ್ರ’ ವಿನಾಯಿತಿ : ಸಿಎಂ ಡಿಕೆಶಿ ಘೋಷಣೆ.!

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ: ಮೊದಲ ಸಂಪುಟ ಸಭೆಯಲ್ಲೇ ಜನಪರ ನಿರ್ಣಯಗಳ ಮಹಾಪೂರ!

State News
KARNATAKA

BREAKING : ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡದಿದ್ದರೆ, ಸಚಿವ ಸ್ಥಾನವೇ ಬೇಡ : ರಾಮಲಿಂಗಾರೆಡ್ಡಿ ಅಸಮಾಧಾನ

By ಸುರೇಶ್‌ KARNATAKA 1 Min Read

ಬೆಂಗಳೂರು : ನೂತನ ಸಿಎಂ ಪದಗ್ರಹಣ ಬೆನ್ನಲ್ಲೆ, ಸಚಿವರಿಗೆ ಖಾತೆ ಹಂಚಿಕೆ ವಿಚಾರವಾಗಿ ಇದೀಗ ಅಸಮಾಧಾನ ಭುಗಿಲೆದ್ದಿದೆ. ರಾಮಲಿಂಗಾರೆಡ್ಡಿ ಇದೀಗ…

BREAKING : ಬಳ್ಳಾರಿಯಲ್ಲಿ ಭೀಕರ ಅಪಘಾತ : ಮೈನಿಂಗ್ ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ-ಮಗ ದುರ್ಮರಣ!

GOOD NEWS : 2500 ಅಡಿ ವಸತಿ ಕಟ್ಟಡಗಳಿಗೆ ಒಂದು ಬಾರಿಯ ‘ಸ್ವಾಧೀನಾನುಭವ ಪ್ರಮಾಣಪತ್ರ’ ವಿನಾಯಿತಿ : ಸಿಎಂ ಡಿಕೆಶಿ ಘೋಷಣೆ.!

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ: ಮೊದಲ ಸಂಪುಟ ಸಭೆಯಲ್ಲೇ ಜನಪರ ನಿರ್ಣಯಗಳ ಮಹಾಪೂರ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.