ಬೆಳಗಾವಿ : ಮದುವೆಯಾಗಲು ನಿರಾಕರಿಸಿದಕ್ಕೆ ಯುವತಿಯ ತಲೆ ಒಡೆದ ಘಟನೆ ಜೋಡ ಕುರುಳಿಯಲ್ಲಿ ನಡೆದಿದೆ. ವಿದ್ಯಾಶ್ರೀ ಕಿಲಾರಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರುಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಬೀರಪ್ಪ ರಾಮಪ್ಪನಿಂದ ಮಾರಣಾಂತಿಕ ಹಲ್ಲೆ ನಡೆದಿದ್ದು ಕಣ್ಣಿಗೆ ಕಾರದ ಪುಡಿ ಅರ್ಜಿ ಕಬ್ಬಿಣದ ರಾಡ್ ನಿಂದ ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಹತ್ತು ಜನರನ್ನು ಕರೆತಂದು ವಿದ್ಯಾಶ್ರೀ ತಂದೆ ತಾಯಿ ಮೇಲೆ ಕೂಡ ಹಲ್ಲೆ ಮಾಡಿದ್ದಾನೆ. ಎರಡು ವರ್ಷದಿಂದ ವಿದ್ಯಾಶ್ರೀ ಮದುವೆ ಮಾಡಿ ಕೊಡುವಂತೆ ಬೀರಪ್ಪ ಕಾಟ ಕೊಡುತ್ತಿದ್ದ.
ಬೀರಪ್ಪನಿಗೆ ಮಗಳನ್ನು ಕೊಡಲು ಮಹದೇವ ಕಿಲಾರಿ ನಿರಾಕರಿಸಿದ್ದ. ಹಾಗಾಗಿ ನಿನ್ನೆ ಇದೇ ಕೋಪದಲ್ಲಿ ರಾತ್ರಿ ಏಕಾಏಕಿ ಮನೆಗೆ ನುಗ್ಗಿ ಕಾರದ ಪುಡಿ ಎರಚಿ ಹಲ್ಲೆ ಮಾಡಿದ್ದಾನೆ. ವಿದ್ಯಾಶ್ರೀ ತಂದೆ ತಾಯಿ ಮೇಲೆಯು ಬೀರಪ್ಪ ಹಲ್ಲೆ ಮಾಡಿದ್ದಾನೆ. ಗಾಯಾಳುಗಳನ್ನು ಚಿಕ್ಕೋಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








