ಒಡಿಶಾ : ಕಳೆದ ಕೆಲವು ದಿನಗಳ ಹಿಂದೆ ಕಲ್ಕತ್ತಾದಲ್ಲಿ ಟ್ರೇನಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ, ಇಡಿ ದೇಶವೇ ಬೆಚ್ಚಿ ಬೀಳಿಸಿತ್ತು. ಇದೀಗ ಮತ್ತೊಂದು ಪಶಾಚಿಕ ಕೃತ್ಯ ನಡೆದಿದ್ದು, ಯುವತಿಯ ಬಾಯಿಗೆ ಮಲ ಹಾಕಿ ವ್ಯಕ್ತಿ ಒಬ್ಬ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಒಡಿಶಾದ ಬೋಲಂಗಿರ್ ಜಿಲ್ಲೆಯಲ್ಲಿ ನಡೆದಿದೆ.
ಹೌದು ಯುವತಿಯ ಬಾಯಿಗೆ ವ್ಯಕ್ತಿಯೊಬ್ಬ ಮಲ ಹಾಕಿ ಹಲ್ಲೆ ನಡೆಸಿರುವ ಹೃದಯ ವಿದ್ರಾವಕ ಘಟನೆ ಒಡಿಶಾದ ಬೋಲಂಗಿರ್ ಜಿಲ್ಲೆಯಲ್ಲಿ ನಡೆದಿದೆ. ಯುವತಿ ತನ್ನ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿರುವಾಗ ಅದೇ ಊರಿನ ವ್ಯಕ್ತಿಯೊಬ್ಬ ಟ್ರ್ಯಾಕ್ಟರ್ ಚಲಾಯಿಸಿ ಆಕೆಯ ಬೆಳೆ ನಾಶಪಡಿಸಿದ್ದಾನೆ.ಬಳಿಕ ಆಕೆಯ ಬಾಯಿಗೆ ಬಲವಂತವಾಗಿ ಮಲವನ್ನು ತುರುಕಿದ್ದಾನೆ.
ಈ ವೇಳೆ ಮಧ್ಯಪ್ರವೇಶಿಸಿ ಆಕೆಯನ್ನು ರಕ್ಷಿಸಲು ಯತ್ನಿಸಿದ ಯುವತಿಯ ಚಿಕ್ಕಮ್ಮನ ಮೇಲೂ ಅದೇ ವ್ಯಕ್ತಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ. ಬಿಜೆಡಿ ಸಂಸದ ನಿರಂಜನ್ ಬಿಸಿ ಭುವನೇಶ್ವರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಪೊಲೀಸರ ನಿಷ್ಕ್ರಿಯತೆಯನ್ನು ಖಂಡಿಸಿದ ಬಿಸಿ, ಸ್ಥಳೀಯ ಸಮುದಾಯದಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.
ಆತನನ್ನು ಬಂಧಿಸಲು ನಾವು ಎರಡು ವಿಶೇಷ ತಂಡಗಳನ್ನು ರಚಿಸಿದ್ದೇವೆ. ಆರೋಪಿಗಳ ಹುಡುಕಾಟಕ್ಕಾಗಿ ಪೊಲೀಸ್ ತಂಡಗಳನ್ನು ನೆರೆಯ ರಾಜ್ಯಗಳಿಗೆ ಕಳುಹಿಸಲಾಗಿದೆ.ಘಟನೆಯ ನಂತರ ಆರೋಪಿ ಪರಾರಿಯಾಗಿದ್ದಾನೆ ಎಂದು ಬೋಲಂಗಿರ್‌ನ ಪೊಲೀಸ್ ವರಿಷ್ಠಾಧಿಕಾರಿ ಖಿಲಾರಿ ರಿಷಿಕೇಶ್ ದ್ನ್ಯಾಂಡಿಯೊ ಖಚಿತಪಡಿಸಿದ್ದಾರೆ.