ವಿಜಯಪುರ : ವಿಜಯಪುರದಲ್ಲಿ ಘೋರವಾದ ದುರಂತವೊಂದು ಸಂಭವಿಸಿದ್ದು, ಮನೆಯ ಮುಂದೆ ಆಟವಾಡುತ್ತಿದ್ದ ಮೂರುವರೆ ವರ್ಷದ ಬಾಲಕನೋರ್ವ ತೆರೆದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ. ಮೃತ ಬಾಲಕನನ್ನು ಮೂರುವರೆ ವರ್ಷದ ಬಾಲಕ ಹರ್ಷಿತ್ ಬಸವರಾಜ ಪಾಟೀಲ ಎಂದು ತಿಳಿದುಬಂದಿದೆ.
ನಿನ್ನೆ ಸಂಜೆ ಮನೆ ಬಳಿ ಇರುವ ನಾಗಪ್ಪನ ಕಟ್ಟೆಯ ಸಮೀಪ ತೆರೆದ ಬಾವಿಗೆ ಬಿದ್ದಿದ್ದನು. ನಿನ್ನೆ ಸಂಜೆಯಿಂದಲೇ ಬಾಲಕ ಕಾಣೆಯಾಗಿದ್ದ. ಎಲ್ಲೆಡೆ ಹುಡುಕಿದರೂ ಸಿಕ್ಕಿರಲಿಲ್ಲ. ಸಂಶಯ ಬಂದು ಅಗ್ನಿಶಾಮಕ ಸಿಬ್ಬಂದಿ ಕರೆಸಿ ಬಾವಿಯಲ್ಲಿ ಇಳಿದು ಹುಡುಕಾಡಿದಾಗ ಶವ ಪತ್ತೆಯಾಗಿದೆ.ಘಟನೆ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.