ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಇದೀಗ ಬೆಚ್ಚಿ ಬೀಳಿಸುವ ವರದಿಯೊಂದು ಹೊರಬಂದಿದ್ದು, ರಾಜ್ಯದಲ್ಲಿ ಬಾಲಗರ್ಭಿಣಿಯರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 2,320 ಅಪ್ರಾಪ್ತೆಯರು ಗರ್ಭಧಾರಣೆ ಆಗಿರುವುದು ಕಳವಳಕಾರಿ ಸಂಗತಿಯಾಗಿದೆ.
ಹೌದು ಕಳೆದ ಮೂರು ವರ್ಷಗಳಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಗರ್ಭಧಾರಣೆ ಪ್ರಕರಣ ಸಂಬಂಧ ಮಕ್ಕಳ ಕಲ್ಯಾಣ ಸಮಿತಿಯಲ್ಲಿ 2,320 ಕೇಸ್ಗಳು ದಾಖಲಾಗಿವೆ. ಬೆಂಗಳೂರು, ಮೈಸೂರು, ಚಿತ್ರದುರ್ಗ, ಗದಗ, ಕೋಲಾರ ಸೇರಿದಂತೆ 729 ಬಾಲಕಿಯರ ಗರ್ಭಧಾರಣೆ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲಾಣ್ಯ ಇಲಾಖೆ ಮಾಹಿತಿ ನೀಡಿದೆ.
ಇದಕ್ಕೆ ಪ್ರಮುಖ ಕಾರಣ ಏನೆಂದರೆ ಕೆಲ ಅಶ್ಲೀಲ ಸಿನಿಮಾ, ವೆಬ್ ಸೀರಿಸ್ಗಳ ಪ್ರೇರಣೆಯಿಂದಾಗಿ ಓದುವ ವಯಸ್ಸಿನಲ್ಲಿ ಬೇಡದ ಜವಾಬ್ದಾರಿಗಳಿಗೆ ಬಾಲಕಿಯರು ಕಾರಣರಾಗುತ್ತಿದ್ಧಾರೆ. ಲೈಂಗಿಕ ಪ್ರಚೋದನೆಗೆ ನೀಡುವ ಕೆಲ ಸಿನಿಮಾ, ರೀಲ್ಸ್ಗಳನ್ನು ಮೊಬೈಲ್ನಲ್ಲಿ ನೋಡುವ ಬಾಲಕಿಯರು ಪ್ರೇಮದ ಕಡೆ ಆಕರ್ಷಣೆಗೊಳಗಾಗುತ್ತಿದ್ಧಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲ ಯುವಕರು, ಅಪ್ರಾಪ್ತೆಯರ ಗರ್ಭಧಾರಣೆಗೆ ಕಾರಣರಾಗುತ್ತಿದ್ಧಾರೆ.
ಇಲಾಖೆಯಿಂದ ಕ್ರಮ
ಬಾಲಕಿಯರು ಗರ್ಭದಾರಣೆ ಪ್ರಕರಣ ತಪ್ಪಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಾಮರ್ಥ್ಯ ಅಭಿವೃದ್ಧಿ ತರಬೇತಿಗೆ ನೀಡಲು ಇಲಾಖೆಯು ಮುಂದಾಗುತ್ತಿದೆ. ಸಂತ್ರಸ್ತರ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ-1098 ನಿರಂತರವಾಗಿ ಕಾರ್ಯನಿರ್ವಹಣೆ ಕ್ರಮ ಕೈಗೊಳ್ಳಲಾಗಿದೆ.
ಬಾಲಗರ್ಭಿಣಿಯರ ಪ್ರಕರಣಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಕಳೆದ ಮುಂಗಾರು ಅಧಿವೇಶನದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ. ಬಾಲ್ಯವಿವಾಹಕ್ಕೂ ನಿಶ್ಚಿತಾರ್ಥ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.







