ಬೆಂಗಳೂರು : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆಯಲ್ಲಿ ನೇಣು ಬಿಗಿದುಕೊಂಡು ಸಂಧ್ಯಾ (16) ಎನ್ನುವ ವಿದ್ಯಾರ್ಥಿನೀ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೈರೇಗೌಡನಹಳ್ಳಿ ಒಂದು ಘಟನೆ ನಡೆದಿದೆ.
ಬೈರೇಗೌಡನಹಳ್ಳಿಯಲ್ಲಿ ಚಿಕ್ಕಬಳ್ಳಾಪುರ ಮೂಲದ ರಾಘವೇಂದ್ರ ಮತ್ತು ಜ್ಯೋತಿ ದಂಪತಿಯ ಪುತ್ರಿ ಸಂಧ್ಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿದ್ಯಾಭ್ಯಾಸಕ್ಕಾಗಿ ಅಕ್ಕ ಶೈಲಜಾ ಮನೆಗೆ ಪುತ್ರಿಯನ್ನು ರಾಘವೇಂದ್ರ ಕಳುಹಿಸಿದ್ದರು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಂಧ್ಯಾ 90 ಪರ್ಸೆಂಟ್ ಅಂಕ ಪಡೆದು ಟಾಪರ್ ಆಗಿದ್ದಳು. ಮೆಡಿಕಲ್ ಓದುವ ಆಸೆಯಿಂದ ನಿನ್ನೆ ಸಂಧ್ಯ ಅರ್ಜಿಯನ್ನು ತಂದಿದ್ದಾಳೆ. ಇದೆ ವೇಳೆ ಅಜ್ಜಿಗೆ ಹುಷಾರಿಲ್ಲ ಎಂದು ಕುಟುಂಬದ ಸದಸ್ಯರು ಆಸ್ಪತ್ರೆಗೆ ತೆರಳಿದ್ದಾರೆ.
ಮನೆಯಲ್ಲಿ ಸಂಧ್ಯಾಳನ್ನು ಒಬ್ಬಳನ್ನೇ ಬಿಟ್ಟು ಕುಟುಂಬಸ್ಥರು ಆಸ್ಪತ್ರೆಗೆ ತೆರಳಿದ್ದಾರೆ. ಬಳಿಕ ಮನೆಯವರು ಮನೆಗೆ ಬಂದು ನೋಡಿದಾಗ ಈ ಒಂದು ಘಟನೆ ಬೆಳಕಿಗೆ ಬಂದಿದೆ. ಡೆತ್ ನೋಟ್ ನಲ್ಲಿ ಸಾರಿ ಅಪ್ಪ ಎಂದು ಬಾಲಕಿ ಸಂಧ್ಯಾ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








