ಬೆಂಗಳೂರು : ಬೆಂಗಳೂರಿನಲ್ಲಿ ಭಾರಿ ಅನಾಹುತ ಒಂದು ತಪ್ಪಿದೆ. ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಂದ ಎಡವಟ್ಟು ಆಗಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ರೋಗಿ ಒಬ್ಬ ಆಸ್ಪತ್ರೆಗೆ ಬಂದಿದ್ದ ಈ ವೇಳೆ O+ ರಕ್ತ ನೀಡೋ ಬದಲು A+ ರಕ್ತ ನೀಡಿ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ.
ರೋಗಿ ಪುನೀತ್ ಸೂರ್ಯಗೆ ಐಸಿಯುನಲ್ಲಿ ಇದೀಗ ಚಿಕಿತ್ಸೆ ಮುಂದುವರಿದಿದೆ. ಚಿಕಿತ್ಸೆಗಾಗಿ ಪುನೀತ್ ಸೂರ್ಯ ಆಸ್ಪತ್ರೆಗೆ ಬಂದಿದ್ದ ಸದ್ಯ ಸಹಜ ಸ್ಥಿತಿಗೆ ಪುನೀತ್ ಸೂರ್ಯ ಮರಳುತ್ತಿದ್ದಾನೆ. ರೋಗಿಗೆ ಬೇರೆ ರಕ್ತ ನೀಡಿದ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಉಮೇಶ ಎಂದು ತಿಳಿದು ಬಂದಿದ್ದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಮೇಶ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಡಳಿತ ಆಸ್ಪತ್ರೆಯ ಮಂಡಳಿ ಭರವಸೆ ನೀಡಿದೆ. ರಜೆ ಕೊಡದ ಹಿನ್ನೆಲೆಯಲ್ಲಿ ತಪ್ಪಾಗಿ ಹೋಯಿತು ಎಂದು ಲ್ಯಾಬ್ ಟೆಕ್ನಿಷಿಯನ್ ತಿಳಿಸಿದ್ದಾನೆ. ಉಮೇಶ್ ಉತ್ತರ ಕೇಳಿ ಸಂಬಂಧಿಕರು ಮತ್ತಷ್ಟು ಕೇರಳಿದ್ದಾರೆ.








