ಬೆಂಗಳೂರು : ಬೆಂಗಳೂರಲ್ಲಿ ರೋಡ್ ರೇಜ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಮತ್ತೊಂದು ರೋಡ್ ರೇಜ್ ಪ್ರಕರಣ ವರದಿಯಾಗಿದೆ. ಕ್ಯಾಮೆರಾದಲ್ಲಿ ರೋಡ್ ರೇಜಿನ ಭಯಾನಕ ದೃಶ್ಯ ಸೆರೆಯಾಗಿದೆ. ಬೆಂಗಳೂರಲ್ಲಿ ಕಾರು ಚಾಲಕನಿಂದ ಅಟ್ಟಹಾಸ ಮೆರೆದಿದ್ದು, ಕಾರಿನ ಬಾನೆಟ್ ಮೇಲೆ ಎಳೆದೊಯ್ದು ಅಟ್ಟಹಾಸ ಮೆರೆದಿದ್ದಾನೆ. ಸುಮಾರು 1 ಕಿಲೋಮೀಟರ್ ದೂರದವರೆಗೆ ವ್ಯಕ್ತಿಯನ್ನು ಕಾರಿನ ಬಾನೆಟ್ ಮೇಲೆ ಎಳೆದೋಯ್ದು ದರ್ಪ ತೋರಿದ್ದಾನೆ.
ನಂಜುಂಡ ಎಂಬ ಚಾಲಕ ಗೂಡ್ಸ್ ಹಣದಲ್ಲಿ ಹೂವು ಸಾಗಿಸುತ್ತಿದ್ದ. ಟ್ರಿನಿಟಿ ಜಂಕ್ಷನ್ ಬಳಿ ಬಲ ತಿರುವು ಪಡೆಯುವಾಗ ಗಲಾಟೆ ಆಗಿದೆ ನಂಜುಂಡನಿಗೆ ಕಾರು ಚಾಲಕ ಸುರೇಶ್ ಅವಾಚ್ಯವಾಗಿ ನಿಂದಿಸಿದ್ದಾನೆ. ಹಿಂದೆ ಬಂದ ಕಾರು ಚಾಲಕ ಸುರೇಶ್ ನಿಂದ ಅವಾಚ್ಯವಾಗಿ ನಿಂದನೆ ಮಾಡಿದ್ದಾನೆ. ನಂತರ ಸಿವಿ ಜಂಕ್ಷನ್ ಬಳಿ ಮತ್ತೆ ಇಬ್ಬರ ಮಧ್ಯೆ ಗಲಾಟೆ ಆಗಿದೆ ಅವಾಚ್ಯ ಪದ ಬಳಕೆ ಪ್ರಶ್ನಿಸಿದ್ದ ಗೂಡ್ಸ್ ಚಾಲಕ ನಂಜುಂಡ.
ಆ ಸಂದರ್ಭದಲ್ಲಿ ವ್ಯಕ್ತಿ ಎದುರುಗಡೆ ಇದ್ದಾನೆ ಎನ್ನುವುದನ್ನು ಕೇರ್ ಮಾಡದೆ ಆತನನ್ನು ಕಾರಿನ ಬಾನೆಟ್ ಮೇಲೆ ಸುಮಾರು ಒಂದು ಕಿಲೋಮೀಟರ್ ವರೆಗೂ ಎಳೆದುಕೊಂಡು ಒಂದು ದರ್ಪ ಮೆರೆದಿದ್ದಾನೆ. ಕಾರ್ ಚಾಲಕ ಸುರೇಶ್ ನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಲಸೂರು ಪೊಲೀಸರಿಂದ ಸುರೇಶ್ ಆಗಿದ್ದಾನೆ, ಕೊಲೆ ಯತ್ನ ಕೆಎಸ್ ದಾಖಲಿಸಿ ಸುರೇಶನ್ನು ಬಂಧಿಸಲಾಗಿದೆ. ಗೂಡ್ಸ್ ವಾಹನ ಚಾಲಕ ನಂಜುಂಡ ದೂರಿನ ಆಧಾರದ ಮೇಲೆ ಸುರೇಶ್ ನನ್ನು ಅರೆಸ್ಟ್ ಮಾಡಲಾಗಿದೆ.








