ಮಂಡ್ಯ : ರಾಜ್ಯದಲ್ಲಿ ಇಂದು ಘೋರವಾದ ಘಟನೆಯ ಒಂದು ಸಂಭವಿಸಿದ್ದು, ಎರಡು ವರ್ಷದ ಮಗುವಿನ ಕತ್ತು ಹಿಸುಕಿ ದಂಪತಿಗಳು ನೇಣಿಗೆ ಶರಣಾಗಿರುವ ಘಟನೆ , ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಜಯನಗರದ ಮನೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಮಗು ಬದುಕುಳಿದಿದೆ ಎಂದು ತಿಳಿದುಬಂದಿದೆ.
ಕಳೆದ ಮೂರು ವರ್ಷದ ಹಿಂದೆ ದರ್ಶನ್ ಮತ್ತು ದಿವ್ಯಶ್ರೀ ಎಂಬುವವರು ವಿವಾಹವಾಗಿದ್ದರು. ಘಟನೆ ಕುರಿತು ಕೆಆರ್ ಪೇಟೆ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಂಪತಿ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ಕೆಆರ್ ಪೇಟೆ ಠಾಣೆ ಪೊಲೀಸ್ ಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.








