ಬೆಳಗಾವಿ : ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮಾತು ಹತ್ಯೆ ಮಾಡಿಕೊಳ್ಳುವುದು ಕೊಲೆ ಮಾಡುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ ಇದೀಗ ಬೆಳಗಾವಿಯಲ್ಲಿ ಕೂಡ ಅಂತಹ ಘಟನೆ ನಡೆದಿದ್ದು, ಕೇವಲ ನೈಟಿ ಹಾಕ್ಕೊಂಡಿದ್ದಕ್ಕೆ ಹೆಂಡತಿಗೆ ಪಾಪಿ ಗಂಡನೊಬ್ಬ ಬೆಂಕಿ ಹಚ್ಚಿದ್ದಾನೆ. ಬೆಳಗಾವಿಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಈ ಒಂದು ಕೃತ್ಯ ಬೆಳಕಿಗೆ ಬಂದಿದೆ.
ಕೃಷ್ಣಜಿ ಪಾಟೀಲ್ ಎಂಬ ಪತ್ನಿಗೆ ಬೆಂಕಿ ಹಚ್ಚಿರುವ ಕಿರಾತಕ ಎಂದು ತಿಳಿದು ಬಂದಿದ್ದು ಬೆಂಕಿಯಿಂದ ಗಂಭೀರವಾಗಿ ಗಾಯಗೊಂಡ ಪತ್ನಿ ಮಂಜುಳ ಇದೀಗ ಆಸ್ಪತ್ರೆಯಲ್ಲಿ ದಾಖಲಾಗಿದ್ದು, 80% ದೇಹ ಸುಟ್ಟಿದ್ದು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಕುಟುಂಬಸ್ಥರು ಗೋವಾಗೆ ಶಿಫ್ಟ್ ಮಾಡಿದ್ದಾರೆ.
ಕಳೆದ ಎಂಟು ವರ್ಷಗಳ ಹಿಂದೆ ಕೃಷ್ಣಾಜಿ ಹಾಗು ಮಂಜುಳಾ ಇಬ್ಬರೂ ಮದುವೆಯಾಗಿದ್ದರು. ಆದರೆ ನಿನ್ನೆ ಕೇವಲ ನೈಟಿ ಹಾಕ್ಕೊಂಡಿದ್ದಕ್ಕೆ ಕೃಷ್ಣಾಜಿ ಪಾಟೀಲ್ ಮಂಜುಳಾ ನಡುವೆ ಗಲಾಟೆ ನಡೆದಿದೆ ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ, ನೈಟಿ ಹಾಕೊಂಡಿದ್ದಕ್ಕೆ ಬೆಂಕಿ ಹಚ್ಚಿ ಕೃತ್ಯ ಎಸಗಿದ್ದಾನೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಆರೋಪಿ ಕೃಷ್ಣಾಜಿ ಪಾಟೀಲನ್ನು ಅರೆಸ್ಟ್ ಮಾಡಿದ್ದಾರೆ.








