ವಿಜಯವಾಡ: ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಆಂಧ್ರಪ್ರದೇಶದ ಎನ್ಟಿಆರ್ ಜಿಲ್ಲೆಯ ಬಾಪುಲಪಾಡು ಮಂಡಲದ ವೀರವಲ್ಲಿ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ನಡೆದಿದೆ.
ನಡೆದಿದ್ದೇನು?
ತರಗತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿ, ತರಗತಿಯಲ್ಲಿದ್ದ ಉಳಿದವರು ನೋಡುತ್ತಿದ್ದಂತೆಯೇ ಶಿಕ್ಷಕರ ಮೇಲೆ ಪಿಳಿಪಿಳಿ ಗುದ್ದಿ ಹಲ್ಲೆ ಮಾಡಿದ್ದಾನೆ.
ವೈರಲ್ ವಿಡಿಯೋ
ಇತರ ಶಿಕ್ಷಕರು ವಿದ್ಯಾರ್ಥಿಯನ್ನು ತಡೆಯಲು ಪ್ರಯತ್ನಿಸಿದರೂ ಆತ ಕೇಳದೆ ಸತತವಾಗಿ ದಾಳಿ ಮಾಡಿದ್ದಾನೆ. ಯಾರೋ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
దుర్భాషలాడిన ఉపాధ్యాయుడిపై 10వ తరగతి విద్యార్థి దాడి
ఎన్టీఆర్ జిల్లా బాపులపాడు మండలం వీరవల్లి జిల్లా పరిషత్ హై స్కూల్లో ఉపాధ్యాయుడిపై దాడి చేసిన 10వ తరగతి విద్యార్థి
చిన్న కారణం గొడవగా మారడంతో దుర్భాషలాడిన ఉపాధ్యాయుడు.. దీనితో పిడిగుద్దులు కురిపించిన విద్యార్థి pic.twitter.com/fNAgVn14nQ
— Telugu Scribe (@TeluguScribe) March 4, 2026








