ಸೋಮವಾರ ಸಂಜೆ ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋ ನಗರದ ಹೆದ್ದಾರಿಗೆ ಹೆಲಿಕಾಪ್ಟರ್ ಅಪ್ಪಳಿಸಿರುವ ಘಟನೆ ನಡೆದಿದೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಸ್ಯಾಕ್ರಮೆಂಟೊ ಅಗ್ನಿಶಾಮಕ ಇಲಾಖೆ ಸ್ಥಳಕ್ಕೆ ತಲುಪುತ್ತಿದ್ದಂತೆ ಅಧಿಕಾರಿಗಳು ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಸ್ಯಾಕ್ರಮೆಂಟೊ ಅಗ್ನಿಶಾಮಕ ಇಲಾಖೆಯ ಪ್ರಕಾರ, ಹೋವೆ ಅವೆನ್ಯೂ ಬಳಿಯ ಪೂರ್ವಕ್ಕೆ ಹೋಗುವ ಹೆದ್ದಾರಿ 50 ರಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಆ ಹೆಲಿಕಾಪ್ಟರ್ ವಾಯು ವೈದ್ಯಕೀಯ ಸೇವೆಗಳನ್ನು ಒದಗಿಸುವ ರೀಚ್ ಹೆಲಿಕಾಪ್ಟರ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
🚨🇺🇸 BREAKING: NEW VIDEO SHOWS HELICOPTER CRASH ON HIGHWAY IN SACRAMENTO
A helicopter went down on Highway 50 in Sacramento, California, Monday night, leaving multiple victims.
The crash happened near 59th Street just after 7 p.m., shutting down eastbound lanes and slowing… https://t.co/C2JAMo4ngm pic.twitter.com/6gJL7btC44
— Mario Nawfal (@MarioNawfal) October 7, 2025