ಮಂಡ್ಯ : ವಿವಾಹಿತ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬನ್ನಹಳ್ಳಿ, ಯರಗನಹಳ್ಳಿಯಲ್ಲಿ ನಡೆದಿದೆ.
ಯರಗನಹಳ್ಳಿ ನಿವಾಸಿಯಾದ ಸೃಷ್ಟಿ ದಿನೇಶ್ ಎಂಬುವರನ್ನು ಮದುವೆಯಾಗಿದ್ದರು. ಆದರೆ ಸೃಷ್ಟಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೃಷ್ಟಿ ಆತ್ಮಹತ್ಯೆ ವಿಷಯ ತಿಳಿದ ಹಳೆಯ ಪ್ರೇಮಿ ಪ್ರಸನ್ನ ಎಂಬಾತನು ಕೂಡ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೆಲವು ವರ್ಷಗಳಿಂದ ಪ್ರಸನ್ನ ಹಾಗೂ ಸೃಷ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಸೃಷ್ಟಿ ದಿನೇಶ್ ಎಂಬಾತನನ್ನು ಮದುವೆಯಾಗಿದ್ದರು. ಇತ್ತ ಸೃಷ್ಟಿ ಗೆಳತಿ ಸ್ಪಂದನ ಜೊತೆಗೆ ಪ್ರಸನ್ನ ಮದುವೆಯಾಗಿದ್ದ. ಆದರೂ ಸೃಷ್ಟಿ ಹಾಗೂ ಪ್ರಸನ್ನ ನಡುವೆ ಪ್ರೀತಿ ಮುಂದುವರೆದಿತ್ತು. ಇದೇ ವಿಚಾರಕ್ಕೆ ಸೃಷ್ಟಿ ಹಾಗೂ ದಿನೇಶ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ 11 ರಂದು ಸೃಷ್ಟಿ ಮನೆಯಿಂದ ನಾಪತ್ತೆಯಾಗಿದ್ದಳು. ಡಿಸೆಂಬರ್ 16 ರಂದು ವೈದ್ಯನಾಥಪುರ ಬಳಿಯ ಶಿಂಷಾ ನದಿಯಲ್ಲಿ ಶವ ಪತ್ತೆಯಾಗಿತ್ತು.
ಸೃಷ್ಟಿ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಪ್ರಸನ್ನ ಕೂಡ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.