ಬೆಂಗಳೂರು : ಇತ್ತೀಚೆಗೆ ರಾಜ್ಯದಲ್ಲಿ ಹೃದಯಘಾತದಿಂದ ಸಾವನಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಅದರಲ್ಲೂ ಯುವಜನತೆಯಲ್ಲಿ ಈ ಒಂದು ಹೃದಯಘಾತ ಹೆಚ್ಚಾಗಿ ಕಂಡುಬರುತ್ತಿದೆ. ಇದೀಗ ಇಂದು ರಾಜ್ಯದಲ್ಲಿ ಹೃದಯಾಘಾತಕ್ಕೆ ಒಂದೇ ದಿನ ಮೂವರು ಬಲಿಯಾಗಿದ್ದಾರೆ.
ಹೌದು ರಾಜ್ಯದಲ್ಲಿ ಇಂದು ಒಂದೇ ದಿನ ಹೃದಯಘಾತಕ್ಕೆ ಮೂವರು ಬಳಿಯಾಗಿದ್ದಾರೆ. ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಮಧ್ಯ ವಯಸ್ಕರು ಇಂದು ಬಲಿಯಾಗಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಗ್ಗೆ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಮಗ್ಗೆ ಗ್ರಾಮದಿಂದ ಆಲೂರಿಗೆ ನೌಕರ ಬಿ ಆರ್ ನಾಗಪ್ಪ ಪ್ರಯಾಣಿಸುತ್ತಿದ್ದರು.
ಈ ವೇಳೆ ಬಸ್ ನಲ್ಲಿ ಹೃದಯಾಘಾತದಿಂದ ನಾಗಪ್ಪ (55) ಮೃತಪಟ್ಟಿದ್ದಾರೆ. ಇನ್ನು ಮತ್ತೊಂದು ಪ್ರಕರಣದಲ್ಲಿ ಮಾಜಿ ನಗರಸಭೆ ಸದಸ್ಯ ನೀಲಕಂಠಪ್ಪ (58) ಅವರು ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಮನೆಯಲ್ಲಿ ಹೃದಯಘಾತದಿಂದ ನೀಲಕಂಠಪ್ಪ ಸಾವನ್ನಪ್ಪಿದ್ದಾರೆ ಹಾಸನ ನಗರದ ಅರಳೆಪೇಟೆ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ.
ಇನ್ನು ಚಿಕ್ಕಬಳ್ಳಾಪುರದಲ್ಲಿ ಜಮೀನು ವಿಚಾರವಾಗಿ ಮಗನ ಮೇಲೆ ವ್ಯಕ್ತಿ ಒಬ್ಬ ಮಚ್ಚಿನಿಂದ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ತನ್ನ ಕಣ್ಣೆದುರಿಗೆ ಮಗನನ್ನು ಕೊಚ್ಚಿ ಕೊಲೆ ಮಾಡಿದ್ದನ್ನು ಕಣ್ಣಾರೆ ಕಂಡ ತಾಯಿ ಒಬ್ಬರು ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೋರೆನಹಳ್ಳಿ ಎಂಬಲ್ಲಿ ನಡೆದಿದೆ.
ಜಮೀನು ವಿವಾದ ಸಂಬಂಧ ಶಿವಣ್ಣ ಅಲಿಯಾಸ್ ಶಿವಶಂಕರ್ ಯುವಕ ನವೀನ್ ಎನ್ನುವವನ ಮೇಲೆ ಮಚ್ಚಿನಿಂದ ದಾಳಿ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಮಗನ ಮೇಲಿನ ದಾಳಿಯನ್ನು ಕಣ್ಣಾರೆ ಕಂಡ ನವೀನ್ ತಾಯಿ ಯಶೋದಮ್ಮ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.