ಬೆಳಗಾವಿ : ಇತ್ತೀಚಿಗೆ ವಯಸ್ಸಿನ ಮಿತಿ ಇಲ್ಲದೆ ಈ ಒಂದು ಹೃದಯಘಾತ ಎನ್ನುವುದು ಸಾಮಾನ್ಯವಾದ ಕಾಯಿಲೆಯಾಗಿ ಬಿಟ್ಟಿದೆ. ಅದರಲ್ಲೂ ಸಣ್ಣ ವಯಸ್ಸಿನ ಮಕ್ಕಳು ಹಾಗೂ ಯುವಕರಿಗೆ ಹೃದಯಾಘಾತ ಬಹಳ ದೊಡ್ಡ ಸಮಸ್ಯೆಯಾಗಿದೆ. ಇದೀಗ ಬೆಳಗಾವಿಯಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಒಬ್ಬರು ಕರ್ತವ್ಯ ಮುಗಿಸಿ ಮನೆಗೆ ಬಂದು ಮಲಗಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮೃತರನ್ನು ಮಲ್ಲಸರ್ಜ ಅಂಕಲಗಿ (45) ಎಂದು ತಿಳಿದುಬಂದಿದೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎಂದಿನಂತೆ ಡ್ಯೂಟಿ ಮುಗಿಸಿ ಮನೆಗೆ ಬಂದ ಮಲ್ಲಸರ್ಜ ಅಂಕಲಗಿ, ಊಟ ಮಾಡಿ ರಾತ್ರಿ ಮಲಗಿದ್ದರು. ಇಂದು ಬೆಳಿಗ್ಗೆ ಎಷ್ಟು ಹೊತ್ತಾದರೂ ಕೂಡ ಏಳದೆ ಇದ್ದಾಗ ಮನೆಯವರು ಗಾಬರಿಗೊಂಡು ಎಬ್ಬಿಸಿದಾಗ ಮಲ್ಲಸರ್ಜಾ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.