ನವದೆಹಲಿ: ಬುರ್ದ್ವಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು 27 ವರ್ಷದ ವ್ಯಕ್ತಿಯ ಹೊಟ್ಟೆಯಿಂದ ಡಿಯೋಡರೆಂಟ್ ಬಾಟಲಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ.
ಕಿಬ್ಬೊಟ್ಟೆ ನೋವಿನ ಕಾರಣದಿಂದ ಒಬ್ಬ ವ್ಯಕ್ತಿ ಬುಧವಾರ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಬಂದಿದ್ದ, ಈ ವೇಳೆಯಲ್ಲಿ ಎಲ್ಲಾ ಟೆಸ್ಟ್ ನಡೆಸಿದ ವೇಳೆಯಲ್ಲಿ 7.5 ಇಂಚು ಉದ್ದದ ಬಾಟಲಿಯನ್ನು ಹೊಟ್ಟೆಯಲ್ಲಿ ಇರೋದನ್ನು ಕಂಡು ವೈದ್ಯರು ಆಘಾತಕ್ಕೊಳಗಾದರು, ಹಲವಾರು ಪರೀಕ್ಷೆಗಳ ನಂತರ, ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಬಾಟಲಿಯನ್ನು ತೆಗೆಯಲು ನಿರ್ಧರಿಸಿದರು. ಬಾಟಲಿಯನ್ನು ತೆಗೆದುಹಾಕಲಾಯಿತು ಮತ್ತು ರೋಗಿಯ ಅನ್ನನಾಳವನ್ನು ಸಹ ಎರಡು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯಲ್ಲಿ ಸರಿಪಡಿಸಲಾಯಿತು ಎನ್ನಲಾಗಿದೆ.
ಡಾ.ಅರಿಂದಮ್ ಘೋಷ್ ಅವರು ಇಂಗ್ಲಿಷ್ ದೈನಿಕ ನ್ಯೂಸ್ 18 ಗೆ ಪ್ರತಿಕ್ರಿಯಿಸಿ, ಡಿಯೋಡ್ರೆಂಟ್ ಬಾಟಲಿಯು ಸುಮಾರು 20 ದಿನಗಳ ಹಿಂದೆ ಗುದನಾಳದ ಮೂಲಕ ಪ್ರವೇಶಿಸಿದೆ ಮತ್ತು ಅಂದಿನಿಂದ ಆ ವ್ಯಕ್ತಿಯು ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದಾರೆ.
“ಇದು ನಮಗೆ ದೊಡ್ಡ ಸಾಹಸವಾಗಿತ್ತು , ನಾವು ಅವರಿಗೆ ಸಂಪೂರ್ಣ ಕಾಳಜಿಯಿಂದ ಚಿಕಿತ್ಸೆ ನೀಡಿದ್ದೇವೆ” ಎಂದು ಆಸ್ಪತ್ರೆಯ ಅಧೀಕ್ಷಕ ತಪಸ್ ಘೋಷ್ ಹೇಳಿದ್ದಾರೆ. ಕಳೆದ ಇಪ್ಪತ್ತು ದಿನಗಳಿಂದ ಈ ವ್ಯಕ್ತಿಯು ತನ್ನ ಹೊಟ್ಟೆಯೊಳಗೆ ಬಾಟಲಿಯನ್ನು ಇಟ್ಟುಕೊಂಡಿದ್ದ ಎನ್ನಲಾಗಿದ್ದು ಮತ್ತು ಕಳೆದ ಕೆಲವು ದಿನಗಳಿಂದ ಪ್ರಕೃತಿಯ ಕರೆಗೆ ಪ್ರತಿಕ್ರಿಯಿಸಲು ಸಹ ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಆಸ್ಪತ್ರೆಯ ವೈದ್ಯಕೀಯ ತಂಡವು ರೋಗಿಯ ಜೀವಕ್ಕೆ ಅಪಾಯವಿದೆ ಮತ್ತು ಆದ್ದರಿಂದ ಅವರು ತಕ್ಷಣದ ಶಸ್ತ್ರಚಿಕಿತ್ಸೆಮಾಡಲು ಮುಂದಾಗಿದ್ದರು ಎನ್ನಲಾಗಿದೆ. “ಆಸ್ಪತ್ರೆಯು ನೀಡಿದ ಚಿಕಿತ್ಸೆಯಿಂದ ನಾವು ಸಂತೋಷವಾಗಿದ್ದೇವೆ. ಸರ್ಕಾರಿ ಆಸ್ಪತ್ರೆಗಳು ಸಾಮಾನ್ಯವಾಗಿ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತವೆ. ಆದರೆ ಅವರು ತುಂಬಾ ಚುರುಕಾಗಿದ್ದರು” ಎಂದು ರೋಗಿಯ ಕುಟುಂಬ ಹೇಳಿದೆ.