ಮೈಸೂರು : ಕಳೆದ ಮಾರ್ಚ್ 5 ರಂದು ಮೈಸೂರಲ್ಲಿ ವೃದ್ದೆಯೊಬ್ಬರ ಸಾವಾಗಿತ್ತು. ಆದರೆ ವೃದ್ದೆಯ ಮಗ ತಾಯಿಯ ಸಾವಿನ ಕುರಿತು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಶಾಕ್ ಆಗಿದೆ. ಏಕೆಂದರೆ ವೃದ್ದೆಯ ಸ್ನೇಹಿತೆನೆ ಆಕೆಯ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಹೌದು ಮೈಸೂರು ವೃದ್ದೆಯ ಮರ್ಡರ್ ಬೆಚ್ಚಿ ಬೀಳಿಸುತ್ತೆ. ಕೊಟ್ಟ ಸಾಲ ಕೇಳಿದಕ್ಕೆ ಎದೆ ಮೇಲೆ ಕುಳಿತು ವೃದ್ದೆಯ ಉಸಿರುಗಟ್ಟಿಸಿ ಹತ್ಯೆಗೈಯ್ಯಲಾಗಿದೆ. ಈ ಕುರಿತು ಮೈಸೂರು ಜಿಲ್ಲಾ ಪೊಲೀಸ್ ಆಯುಕ್ತೆ ಸಿಮಾ ಲಾಟ್ಕರ್ ಸ್ಪೋಟಕವಾದ ಮಾಹಿತಿ ನೀಡಿದ್ದಾರೆ. ಕೊಲೆ ಮಾಡಿದ್ದಾಗಿ ಆರೋಪಿ ಶಕುಂತಲಾ ತಪ್ಪು ಒಪ್ಪಿಕೊಂಡಿದ್ದಾಳೆ.ಸದ್ಯ ಆಕೆಯನ್ನು ಜೈಲಿಗೆ ಅಟ್ಟಲಾಗಿದೆ.
ಶಕುಂತಲಾ ಗೆ 2.5 ಲಕ್ಷ ಸಾಲ ಕೊಟ್ಟಿದ್ದ ಮೃತ ಸುಲೋಚನಾ ಮಾರ್ಚ್ 5 ರಂದು ಸಾಲ ಕೇಳಲು ಶಕುಂತಲಾ ಮನೆಗೆ ತೆರಳಿದ್ದಾಳೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯ ಗಲಾಟೆ ಆಗಿದೆ. ಗಲಾಟಿ ನಂತರ ಶಕುಂತಲಾ ಉಸಿರು ಕಟ್ಟಿಸಿ ಸುಲೋಚನಾಳನ್ನು ಕೊಲೆ ಮಾಡಿದ್ದಾಳೆ. ಬಳಿಕ ಸುಲೋಚನಾ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಮೃತಳ ಕುಟುಂಬಸ್ಥರಿಗೆ ಹೀಗೆ ನಂಬಿಸಿದ್ದರು.
ಕೊಲೆ ಮಾಡಿ ಮನೆಯಲ್ಲಿ ಸುಲೋಚನಾ ದೇಹದ ಮೇಲಿದ್ದ ಚಿನ್ನವನ್ನು ಗಿರವಿ ಇಟ್ಟಿದಳು. ಮಾಂಗಲ್ಯ ಸರದ ಜೊತೆ ಬಳೆ ಮತ್ತು ಚಿನ್ನವನ್ನು ಗಿರವಿ ಇಟ್ಟಿದ್ದಳು. ಗಿರವಿಟ್ಟು 1.5 ಲಕ್ಷ ಹಣದಿಂದ ಸಾಲ ತೀರಿಸಿದ್ದಳು. ಸುಲೋಚನಾ ಕೊಂದ ರಾತ್ರಿಯೆ ಎಲ್ಲರ ಸಾಲ ತೀರಿಸಿದ್ದ ಆರೋಪಿ ಶಕುಂತಲಾ. ವೃದ್ಧೆಯ ಮಗ ನೀಡಿದ ದೂರನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಪೊಲೀಸರು ಶಕುಂತಲಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಒಂದು ಕೊಲೆ ರಹಸ್ಯ ಬೆಳಕಿಗೆ ಬಂದಿದೆ.