ಲಕ್ನೋ: ಬೇರೊಬ್ಬ ಯುವತಿಯನ್ನು ಮದುವೆಯಾಗಲು ಸಿದ್ಧವಾಗಿದ್ದ ಪ್ರಿಯಕರನನ್ನು ಕೊನೆಯ ಬಾರಿಗೆ ಅವನನ್ನು ನೋಡಲು ಕರೆದು, ಆತನ ಖಾಸಗಿ ಅಂಗವನ್ನು ಯುವತಿಯೊಬ್ಬಳು ಚಾಕುವಿನಿಂದ ಕತ್ತರಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ. ಜೋಡಿ ಎಂಟು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದರು. ಆದರೆ ಯುವಕ ಬೇರೆ ಯುವತಿಯನ್ನು ಮದುವೆಯಾಗಲು ಸಿದ್ಧನಾಗಿದ್ದಾನೆ. ಈ ವಿಷಯ ಆತನ ಗೆಳತಿಗೆ ತಿಳಿಯಿತು. ಅವನ ಮೇಲೆ ಸೇಡು ತೀರಿಸಿಕೊಳ್ಳಲು ಯೋಚಿಸಿದಳು. ಇದೇ ವೇಳೆ ಮಹಿಳೆ ತನ್ನ ಪ್ರಿಯಕರನನ್ನು ಕೊನೆಯ ಬಾರಿಗೆ ಭೇಟಿಯಾಗಲು ಕರೆದಿದ್ದಾಳೆ. ಏಕಾಂತ ಪ್ರದೇಶದಲ್ಲಿ ಭೇಟಿಯಾದ ಬಳಿಕ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗುವ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಹಿನ್ನಲೆಯಲ್ಲಿ ಯುವತಿ ತಾನು ತಂದಿದ್ದ ಚಾಕುವಿನಿಂದ ಯುವಕನ ಖಾಸಗಿ ಅಂಗವನ್ನು ಕತ್ತರಿಸಿದ್ದಾನೆ. ಬಳಿಕ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಮತ್ತೊಂದೆಡೆ ಆ ವ್ಯಕ್ತಿ ತನ್ನ ಖಾಸಗಿ ಅಂಗಕ್ಕೆ ಪೆಟ್ಟು ಬಿದ್ದು ರಕ್ತಸ್ರಾವವಾಗುತ್ತಿದ್ದರೂ ಗೆಳತಿಯ ಕೈ ಗಾಯಕ್ಕೆ ಬಟ್ಟೆ ತೊಡಿಸಿ ಆಕೆಯ ಪ್ರಾಣ ಉಳಿಸಿದ್ದಾನೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರದೇಶವನ್ನು ತಲುಪಿದರು. ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
मुज़फ्फरनगर : प्रेमिका ने प्रेमी का काटा गुप्तांग
➡प्रेमी द्वारा प्यार में धोखा मिलने से काटा गुप्तांग
➡प्रेमिका ने मिलने के बहाने बुलाकर गुप्तांग काटा
➡8 साल से चल रहा था दोनों के बीच अफेयर
➡प्रेमी की शादी दूसरी लड़की से तय होने से थी नाराज
➡पुलिस ने प्रेमी को जिला… pic.twitter.com/OIQydCiPa0— भारत समाचार | Bharat Samachar (@bstvlive) December 22, 2024