ಬೆಂಗಳೂರು : ಕರೆದ ಹಸಿರು ಪುಟಾಣಿಯಲ್ಲಿ ಇದೀಗ ಅಪಾಯಕಾರಿ ಅಂಶ ಪತ್ತೆಯಾಗಿದೆ ಬಟಾಣಿಗಳಲ್ಲಿ ಪತ್ತೆಯಾಗಿದ್ದು ಬಟಾಣಿಯಲ್ಲಿ ಆರೋಗ್ಯಕ್ಕೆ ಹಾನಿಕಾರ ಉಂಟಾಗಲಿದೆ ಟಾಟಾ ಬಣ್ಣದಿಂದ ಆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಸಿರು ಬಟಾಣಿಯಿಂದ ದೇಹಕ್ಕೆ ಹಾನಿಕರ ಎಂದು ಇದೀಗ ವರದಿಯಲ್ಲಿ ಬಯಲಾಗಿದೆ.
ಹೌದು ಕರಿದ ಹಸಿರು ಬಟಾಣಿಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ. ಬಟಾಣಿಯಲ್ಲಿ ಕಲರ್ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಟಾರ್ಟಾಜಿನ್ ಬಣ್ಣದಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಹಸಿರು ಬಟಾಣಿ ಡೇಂಜರ್ ಎಂದು ವರದಿಯಲ್ಲಿ ಬಯಲಾಗಿದೆ. 96 ಮಾದರಿಯಲ್ಲಿ 64 ಮಾದರಿ ಅಸುರಕ್ಷಿತ ಎಂದು ವರದಿಯಲ್ಲಿ ತಿಳಿದು ಬಂದಿದೆ, ಲ್ಯಾಬರೋಟರಿ ಪರೀಕ್ಷೆಯಲ್ಲಿ ವರದಿ ಬಂದಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಕುರಿತು ಮಾಹಿತಿ ಬಂದಿದೆ.
ಈ ಕುರಿತು ಕೃತಕ ಬಣ್ಣ ಪತ್ತೆಗೆ ಸಂಬಂಧಿಸಿದಂತೆ ಆಹಾರ ಸುರಕ್ಷತೆ ಮತ್ತು ಔಷಧ ಗುಣಮಟ್ಟ ಇಲಾಖೆ ಅಧಿಕಾರಿಗಳು ಕರಿದ ಹಸಿರು ಬಟಾಣಿಗಳ 96 ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದ್ದು, ಅವುಗಳಲ್ಲಿ 64 ಮಾದರಿಗಳು ಅಸುರಕ್ಷಿತ ಎನ್ನುವುದು ದೃಢಪಟ್ಟಿದೆ.
ಈವರೆಗೆ ಕರಿದ ಹಸಿರು ಬಟಾಣಿಗಳ 114 ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.ಅವುಗಳಲ್ಲಿ 96 ಮಾದರಿಗಳ ವಿಶ್ಲೇಷಣೆ ಪೂರ್ಣಗೊಂಡಿದೆ. ಉಳಿದ ಮಾದರಿಗಳ ವಿಶ್ಲೇಷಣಾ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪ್ರಯೋಗಾಲಯದ ವರದಿಗಳ ಆಧಾರ ಮುಂದಿನ ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತದೆ ಎಂದು ಇಲಾಖೆ ಆಯುಕ್ತರು ತಿಳಿಸಿದ್ದಾರೆ.